ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ: ಏರ್ ಪೋರ್ಟ್ ನಲ್ಲಿ ಶ್ವಾನ ಜ್ಯಾಕ್ ನಿಂದ ತೀವ್ರ ತಪಾಸಣೆ…

Promotion

ಮಂಗಳೂರು,ಜ,21,2020(www.justkannada.in):   ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರ ಏರ್ ಪೋರ್ಟ್ ನಲ್ಲಿ ಇಂದು ಸಹ ತೀವ್ರ ತಪಾಸಣೆ ನಡೆಸಲಾಗುತ್ತಿದೆ.

ಮಂಗಳೂರಿನ ಏರ್ ಪೋರ್ಟ್ ನಲ್ಲಿ ಸಿಐಎಸ್ ಎಫ್ ನ ಶ್ವಾನ ಜ್ಯಾಕ್ ನಿಂದ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಮೂರು ತಂಡಗಳನ್ನ ರಚಿಸಲಾಗಿದ್ದು, ಬಾಂಬ್ ಇಟ್ಟ ವ್ಯಕ್ತಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಇನ್ನು ಆಟೋಚಾಲಕನನ್ನ ವಶಕ್ಕೆ ಪಡೆಯಲಾಗಿದೆ ಎನ್ನಲಾಗುತ್ತಿದೆ.

ಈ ನಡುವೆ  ಬೆಂಗಳೂರು ಎನ್ ಐಎ ತಂಡ ಮಂಗಳೂರಿಗೆ ಭೇಟಿ ನೀಡಿ ಪೊಲೀಸರಿಂದ ಮಾಹಿತಿ ಕಲೆ ಹಾಕಿದ್ದಾರೆ. ದೆಹಲಿ ಎನ್ ಐಎ ತಂಡ ಸಹ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Key words: Bomb detection -case –Mangalore- airport- inspection