ಕೇಂದ್ರದಿಂದ ಮಲತಾಯಿ ಧೋರಣೆ: ಬಿಜೆಪಿ ನಾಯಕರಿಗೆ ಜನರ ಮೇಲೆ ಕಾಳಜಿ ಇಲ್ಲ -ಸಚಿವ ರಾಮಲಿಂಗಾರೆಡ್ಡಿ.

Promotion

ಬೆಂಗಳೂರು,ಜೂನ್,15,2023(www.justkannada.in): ಕೇಂದ್ರ ಸರ್ಕಾರದ  ಬಳಿ ಅಕ್ಕಿ ದಾಸ್ತಾನು ಇರುತ್ತೆ. ಆದರೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ. ಬಿಜೆಪಿ ನಾಯಕರಿಗೆ ರಾಜ್ಯದ ಜನರ ಮೇಲೆ ಕಾಳಜಿ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಆಗಿನ ಬೊಮ್ಮಾಯಿ ಸರ್ಕಾರ ಅಕ್ಕಿಯನ್ನ 4 ಕೆಜಿಗೆ ಇಳಿಸಿದ್ರು. ಈಗ  ಅಕ್ಕಿ ನೀಡಲು ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ. ಬಿಜೆಪಿ ನಾಯಕರಿಗೆ ರಾಜ್ಯದ ಜನರ ಮೇಲೆ ಕಾಳಜಿ ಇಲ್ಲ. ಕಾಳಜಿ ಇದ್ದರೇ ಕೇಂದ್ರಕ್ಕೆ ಅಕ್ಕಿ ಕೊಡಿ ಎಂದು ಹೇಳಲಿ ಎಂದು ಕಿಡಿಕಾರಿದರು.

ಪಾರ್ಲಿಮೆಂಟ್ ಚುನಾವಣೆಗೆ ಕಾಂಗ್ರೆಸ್ ಪ್ರಬಲ ಆಗುತ್ತೆ ಅಂತ ಭಯ ಅವರಿಗೆ.  ಬಿಜೆಪಿಯವರಿಗೆ ಸೋಲಿನ ಹತಾಶೆಯಿಂದ ಏನ್ ಮಾತಾಡ್ತಾರೆ ಅಂತ ಅವರಿಗೆ ಗೊತ್ತಾಗಲ್ಲ. ಅವರಿಗೆ ಅವರೇ ಸೋಲಿಸಿದ್ದಾರೆ ಅಂತ ಹತಾಶೆ ಆಗಿದ್ದಾರೆ  ಎಂದು ಸಚಿವ ರಾಮಲಿಂಗರೆಡ್ಡಿ ಲೇವಡಿ ಮಾಡಿದರು.

Key words: BJP- leaders – not -care –about- people-Minister-Ramalingareddy.