ಪರಿವಾರ ಮತ್ತು ತಳವಾರ ಮಸೂದೆ ಅಂಗೀಕಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಧನ್ಯವಾದ ಅರ್ಪಿಸಿದ ಸಂಸದ ಪ್ರತಾಪ್ ಸಿಂಹ…

ಬೆಂಗಳೂರು,ಮಾ,11,2020(www.justkannada.in): ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ‘ಪರಿವಾರ’, ‘ತಳವಾರ’ ಸಮುದಾಯದ ಜನರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂವಿಧಾನದ (ಪರಿಶಿಷ್ಟ ಪಂಗಡ) ಆದೇಶ (2ನೇ ತಿದ್ದುಪಡಿ) ಮಸೂದೆಗೆ ಲೋಕಸಭೆಯ ಅಂಗೀಕಾರ ದೊರೆತಿದ್ದರೂ ರಾಜ್ಯಸಭೆಯಲ್ಲಿ  ಮಸೂದೆ  ಮಂಡನೆ ಮಾಡಿದ್ದಾಗ ಪರಿಶಿಷ್ಟ ಜನಾಂಗ  ತಿದ್ದುಪಡಿ ಮಸೂದೆ-2019 “ ಎಂದಾಗಿತ್ತು.bill-passed-rajya-sabha-mp-pratap-simha-thanked-union-minister-prahlad-joshi

ಹೀಗಾಗಿ ಇಂದು ಪರಿವಾರ ಮತ್ತು ತಳವಾರ ಮಸೂದೆಯನ್ನ ರಾಜ್ಯಸಭೆಯಲ್ಲಿ ತಂದು “ 2020 “ ಎಂದು ಸರಿಪಡಿಸಬೇಕಿತ್ತು. ಇಂದು ಇದನ್ನ ಸರಿಪಡಿಸಲಾಗಿದ್ದು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಬೇಕಾಗಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಿತ್ತು. ಬಳಿಕ ಫೆಬ್ರವರಿ 11 2020 ರಂದು ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗಿತ್ತು.

ಪರಿವಾರ ಮತ್ತು ತಳವಾರ ಮಸೂದೆ ಅಂಗೀಕಾರವಾದ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಸಂಸದ ಪ್ರತಾಪ್ ಸಿಂಹ, ಪರಿವಾರ ಮತ್ತು ತಳವಾರ ಮಸೂದೆಯನ್ನ ಫೆಬ್ರವರಿ 11 ರಂದು ಪಾಸು ಮಾಡಿದ್ದರೂ, ರಾಜ್ಯಸಭೆಯಲ್ಲಿ ನವೆಂಬರ್ ನಲ್ಲಿ ಪಾಸು ಮಾಡಿದಾಗ ಪರಿಶಿಷ್ಟ ಜನಾಂಗ ತಿದ್ದುಪಡಿ ಮಸೂದೆ-2019 ಎಂದಾಗಿತ್ತು.  ಮತ್ತೆ ಅದನ್ನ ರಾಜ್ಯಸಭೆ ಮುಂದೆ ತಂದು 2020  ಎಂದು ಸರಿಪಡಿಸಬೇಕಿತ್ತು.  ಅದನ್ನು ಇಂದು ಮಧ್ಯಾಹ್ನ 2.35ಕ್ಕೆ  ಪೂರೈಸಲಾಯಿತು. ಕೂಡಲೇ ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸುತ್ತೇವೆ, ಬೆನ್ನಲ್ಲೆ ಗೆಜೆಟ್ ನೋಟಿಫಿಕೇಷನ್ ಮಾಡಿಸಿಕೊಡುತ್ತೇನೆ. ಈ ಎಲ್ಲಾ ಪ್ರಕ್ರಿಯೆಗಳ ಹಿಂದಿರುವ ದೊಡ್ಡ ಶಕ್ತಿ ಪ್ರಹ್ಲಾದ್ ಜೋಶಿಯವರಿಗೆ ಧನ್ಯವಾದಗಳು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Key words: Bill -passed – Rajya Sabha-MP-Pratap Simha-thanked -Union Minister- Prahlad Joshi.