ಬಾಂಗ್ಲಾ ವಿರುದ್ಧ ಟಿ-20 ಸರಣಿಯಲ್ಲಿ ಕೊಹ್ಲಿ-ರೋಹಿತ್ ನಡುವೆ ‘ರನ್ ಸಮರ’ !

Promotion

ಬೆಂಗಳೂರು, ಡಿಸೆಂಬರ್ 06, 2019 (www.justkannada.in): ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರರಾಗಲು ಕೊಹ್ಲಿ ಹಾಗೂ ರೋಹಿತ್ ನಡುವೆ ಸ್ಪರ್ಧೆ ಆರಂಭವಾಗಿದೆ.

ರೋಹಿತ್ ಶರ್ಮಾ 93 ಇನ್ನಿಂಗ್ಸ್ ಗಳಲ್ಲಿ 2,539 ರನ್ ಗಳಿಸಿದ್ದು, ಕೊಹ್ಲಿ 67 ಇನ್ನಿಂಗ್ಸ್ ಗಳಲ್ಲಿ 2,450 ರನ್ ಗಳಿಸಿದ್ದಾರೆ. ಇದರೊಂದಿಗೆ ಟಿ20 ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 2 ಸ್ಥಾನಗಳಲ್ಲಿ ರೋಹಿತ್, ಕೊಹ್ಲಿ ಸ್ಥಾನ ಪಡೆದಿದ್ದಾರೆ.

ಹೀಗಾಗಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಯಾರು ಹೆಚ್ಚು ರನ್ ಗಳಿಸಿ ನಂಬರ್ ವನ್ ಸ್ಥಾನದಲ್ಲಿ ಉಳಿಯುತ್ತಾರೆ ಎಂಬ ಕುತೂಹಲ ಮೂಡಿದೆ. ಟಿ-20 ಮಾದರಿಯಲ್ಲಿ 50+ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲೂ ಕೊಹ್ಲಿ, ರೋಹಿತ್ ಶರ್ಮಾ ನಡುವೆ ಪೈಪೋಟಿ ಸಾಗಿದೆ.