ಹೊಸ ವರ್ಷಾಚರಣೆಗೆ ಬೆಂಗಳೂರು ನಗರ ಸಜ್ಜು: ಪ್ರಮುಖ ರಸ್ತೆಗಳಲ್ಲಿ ಅಲರ್ಟ್.

ಬೆಂಗಳೂರು,ಡಿಸೆಂಬರ್,31,2022(www.justkannada.in):  ಹೊಸವರ್ಷಾಚರಣೆಗೆ ಕೌಂಟ್ ಡೌನ್ ಶುರುವಾಗಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಅಲರ್ಟ್ ಆಗಿದ್ದು ತಪಾಸಣೆ ನಡೆಸಿದ್ದಾರೆ.

ನಗರದ  ಬ್ರಿಗೇಡ್ ರಸ್ತೆ ಎಂ.ಜಿ ರಸ್ತೆ  ಚರ್ಚ್ ಸ್ಟ್ರೀಟ್ ನಲ್ಲಿ  ಹೊಸವರ್ಷದ ಸಂಭ್ರಮಾಚರಣೆ ಜೋರಾಗಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಶ್ವಾನದಳ ಬಾಂಬ್ ನಿಷ್ಕ್ರಿಯ ದಳದ ಸಿಬಂದಿ ಪರಿಶೀಲನೆ ನಡೆಸಿದ್ದಾರೆ.  ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಪ್ರಮುಖ ರಸ್ತೆಗಳಲ್ಲಿ ರಸ್ತೆಯುದ್ದಕ್ಕೂ  ಪೊಲೀಸರು ತಪಾಸಣೆ ನಡೆಸಿದ್ದು, ಈಗಾಗಲೇ ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರ  ಬಂದ್ ಮಾಡಲಾಗಿದೆ. ಈ ನಡುವೆ ಟೋಯಿಂಗ್ ಶುರುವಾಗಿದ್ದು, ಸಂಜೆ 4 ಗಂಟೆವರೆಗೆ ಮಾತ್ರ ವಾಹನ ಪಾರ್ಕಿಂಗ್ ಅವಕಾಶ ನೀಡಲಾಗಿತ್ತು. ಬಳಿಕ ವಾಹನ ತೆರವು ಮಾಡುವಂತೆ ಟ್ರಾಫಿಕ್ ಪೊಲೀಸರು ಸೂಚಿಸಿದ್ದರು. ಇದೀಗ ಎಂಜಿ ರಸ್ತೆಯಲ್ಲಿ ತೆರವು ಮಾಡದ ವಾಹನಗಳನ್ನ ಟೋಯಿಂಗ್ ಮಾಡುತ್ತಿದ್ದಾರೆ.  ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಲು ಟೋಯಿಂಗ್ ನಡೆಸಲಾಗುತ್ತಿದೆ.

ಮಧ್ಯರಾತ್ರಿ 1ಗಂಟೆವರೆಗೆ ಮಾತ್ರ ಹೊಸ ವರ್ಷ ಸೆಲಬ್ರೇಷನ್ ಗೆ ಅವಕಾಶ ನೀಡಲಾಗಿದ್ದು, ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಬ್ರಿಗೇಡ್ ರಸ್ತೆಯಲ್ಲಿ ಮಾಸ್ಕ್ ಧರಿಸುವಂತೆ ಸಾರ್ವಜನಿಕರಿಗೆ ಬಿಬಿಎಂಪಿ ಮಾರ್ಷಲ್ ಗಳು ಜಾಗೃತಿ ಮೂಡಿಸುತ್ತಿದ್ದಾರೆ.

Key words: Bengaluru- city – New Year-Alert – major roads.