ಬೆಳಗಾವಿ ಎರಡು ರಾಜ್ಯಗಳ ಯುದ್ಧರಂಗವಲ್ಲ:  ಶಾಂತಿ ಕದಡಲು ಬಿಡುವುದಿಲ್ಲ- ಗೃಹ ಸಚಿವ ಅರಗ ಜ್ಞಾನೇಂದ್ರ.

Promotion

ಬೆಂಗಳೂರು,ಡಿಸೆಂಬರ್,5,2022(www.justkannada.in):  ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಬೇಳಗಾವಿ ಜಿಲ್ಲೆ ಸದ್ಯಕ್ಕೆ ಶಾಂತವಾಗಿದೆ. ಜಿಲ್ಲೆಯಲ್ಲಿ ಶಾಂತಿ ಕದಡಲು ಅವಕಾಶ ನೀಡುವುದಿಲ್ಲ. ಬೆಳಗಾವಿ ಎರಡು ರಾಜ್ಯಗಳ ಯುದ್ದರಂಗ ಅಲ್ಲ.  ನೆಲೆ, ಜಲ ಕಾಪಾಡುವ ದೃಷ್ಠಿಯಿಂದ  ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಭಾವನಾತ್ಮಕವಾಗಿ ಕೆರಳಿಸಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ . ಸಿಎಂ ಬೊಮ್ಮಾಯಿ ಜೊತೆ ಚರ್ಚೆ ಮಾಡುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

Key words: Belgaum – not – battle-ground –between- two states-Home Minister- Araga Jnanendra.