ಕರ್ನಾಟಕದ ಪ್ರಕಾರ ಗಡಿವಿವಾದ ಮುಗಿದ ಅಧ್ಯಾಯ: ಆದ್ರೂ ಮಹಾರಾಷ್ಟ್ರದಿಂದ ಖ್ಯಾತೆ- ಸಿಎಂ ಬೊಮ್ಮಾಯಿ ಕಿಡಿ.

ಹುಬ್ಬಳ್ಳಿ,ಡಿಸೆಂಬರ್,5,2022(www.justkannada.in): ಕರ್ನಾಟಕದ ಪ್ರಕಾರ ಗಡಿ ವಿವಾದ ಮುಗಿದ ಅಧ್ಯಾಯ: ಆದರೂ ಮಹಾರಾಷ್ಟ್ರ ಕ್ಯಾತೆ ತೆಗದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು  ಸಿಎಂಬಸವರಾಜ  ಬೊಮ್ಮಾಯಿ ಕಿಡಿ ಕಾರಿದರು.

ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಭೇಟಿ ನೀಡುವ ವಿಚಾರ ಕುರಿತು ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಕರ್ನಾಟಕಕ್ಕೆ ಮಹಾರಾಷ್ಟ್ರಸಚಿವರು ಬರೋದು ಬೇಡ.  ಈಗಾಗಲೇ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿ ಲಿಖಿತವಾಗಿ ತಿಳಿಸಿದ್ದಾರೆ. ಈಗನ ವಾತಾವರಣದಲ್ಲಿ ಮಹಾರಾಷ್ಟ್ರ ಸಚಿವರು ಬರೋದು ಬೇಡ. ಕರ್ನಾಟಕ ಮಹಾರಾಷ್ಟ್ರ ಜನರ ನಡುವೆ ಸಾಮರಸ್ಯತೆ ಇದೆ. ಇದೇ ಸಂದರ್ಭದಲ್ಲಿ ಗಡಿ ವಿವಾದವಿದೆ. ಆದರೂ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರುವ ಸಾಹಸ ಮಾಡಿದ್ದಾರೆ. ಅಗತ್ಯ ಕ್ರಮ ಕೈಗೊಳ್ಳಲು ಈಗಾಗಲೇ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.

ಇನ್ನು ಕೇಸರಿ ಶಾಲೆಗಳನ್ನ ಆರಂಭಿಸುವ ವಿಚಾರವಾಗಿ ನಾವು ಮಾತನಾಡಿಲ್ಲ. ಮೊದಲಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಗುರಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Karnataka–Maharastra- border- dispute – over- CM Bommai