ಉದ್ಯಮಿ ಅಪಹರಿಸಲು ಯತ್ನ:  ಮೈಸೂರಿನಲ್ಲಿ ಐವರ ಬಂಧನ…

0
2

ಮೈಸೂರು,ಡಿಸೆಂಬರ್,5,2022(www.justkannada.in): ಉದ್ಯಮಿಯೊಬ್ಬರನ್ನ ಅಪಹರಿಸಲು ಯತ್ನಿಸಿದ್ದ ಐವರು ಅಪಹರಣಕಾರರನ್ನ ಮೈಸೂರು ಪೊಲೀಸರು ಬಂಧಿಸಿದ್ದಾರೆ. 

ಉದ್ಯಮಿಯ ಲಾರಿ ಡ್ರೈವರ್ ಹಾಗೂ ಸಹಚರರಿಂದ ಅಪಹರಣ ಯತ್ನ ಕೃತ್ಯ ನಡೆದಿದೆ. ಹಣಕ್ಕೆ ಬೇಡಿಕೆ ಇಡುವ ಸಲುವಾಗಿ ಉದ್ಯಮಿಯೊಬ್ಬರನ್ನ ಅಪಹರಿಸಲು ಬಂಧಿತ ಐವರು ಪ್ಲಾನ್​ ರೂಪಿಸಿದ್ದರು. ಅಂತೆಯೇ  ಬೆಂಗಳೂರು-ಮೈಸೂರು ರಸ್ತೆಯ ಮಣಿಪಾಲ್ ಆಸ್ಪತ್ರೆ ಸಿಗ್ನಲ್ ಬಳಿ ಅಪಹರಣಕ್ಕೆ ವಿಫಲ ಯತ್ನ ನಡೆಸಿದ್ದರು. ಈ ಕುರಿತು ನರಸಿಂಹ ರಾಜ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಪ್ರಕರಣ ಭೇದಿಸಿ ಐವರು ಅರೋಪಿಗಳನ್ನು ನಗರದ ನರಸಿಂಹರಾಜ ಠಾಣಾ ಪೋಲಿಸರು  ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಹುಂಡೈ ಕಾರು, 1 ದ್ವಿಚಕ್ರ ವಾಹನ, 3 ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Key words: attempt – kidnap – businessman-Five -arrested – Mysore.