ಸಿದ್ಧರಾಮಯ್ಯ ಅವರೇ  ಮುಂದಿನ ಸಿಎಂ ಆಗಬೇಕು: ಅವರಿಗೆ ಚಾಮರಾಜಪೇಟೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧ- ಶಾಸಕ ಜಮೀರ್ ಅಹ್ಮದ್ ಖಾನ್ .

ಬೆಂಗಳೂರು,ಡಿಸೆಂಬರ್,5,2022(www.justkannada.in): ಸಿದ್ಧರಾಮಯ್ಯ ಅವರೇ  ಮುಂದಿನ ಸಿಎಂ ಆಗಬೇಕು. ಅದರೆ ಸಿಎಂ ವಿಚಾರದ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ. ಅವರಿಗೆ ಚಾಮರಾಜಪೇಟೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಖಾನ್, ಚಾಮರಾಜಪೇಟೆಯಿಂದ ಸಿದ್ಧರಾಮಯ್ಯ ಸ್ಪರ್ಧೆ ಮಾಡಲಿ. ಈಗಲೂ ಆಹ್ವಾನ ನೀಡುತ್ತೇನೆ. ಸಿದ್ಧರಾಮಯ್ಯಗೆ ಚಾಮರಾಜಪೇಟೆ ಕ್ಷೇತ್ರ ಬಿಟ್ಟುಕೊಡುತ್ತೇನೆ.  ಸಿದ್ಧರಾಮಯ್ಯ ಚಾಮರಾಜಪೇಟೆ ಅಳಿಯ.  ನಾನು ಚಾಮರಾಜಪೇಟೆ ಮನೆ ಮಗ.  ಚಾಮರಾಜಪೇಟೆಯಲ್ಲಿ ಸಿದ್ಧರಾಮಯ್ಯ ಸ್ಪರ್ಧಿಸಿದ್ರೆ ಸಿದ್ಧರಾಮಯ್ಯ ಗೆದ್ದೇ ಗೆಲ್ತಾರೆ ಎಂದರು.

ನಾನು ಚಾಮರಾಜಪೇಟೆ ಮನೆ ಮಗ.  ಯಾರೇ ಬರಲಿ ಚುನಾವಣೆಯಲ್ಲಿ ಗೆಲ್ಲುತ್ತೇನೆ.  ಹೆಚ್.ಡಿ ಕುಮಾರಸ್ವಾಮಿ ಯಾರನ್ನೆ ನಿಲ್ಲಿಸಿಲಿ . ಬಿಜೆಪಿಯವರು ಯಾರನ್ನೇ ಅಭ್ಯರ್ಥಿ ಮಾಡಿದರೂ ಸರಿ. ನಾನೇ ಗೆಲ್ಲುತ್ತೇನೆ.  ಕ್ಷೇತ್ರದ ಜನರು ನನ್ನನ್ನ ಬಿಟ್ಟುಕೊಡ್ತಾರಾ..? ಎಂದು ಜಮೀರ್ ಹೇಳಿದರು.

ಬಿಜೆಪಿಗೆ ಸಿದ್ದರಾಮಯ್ಯರನ್ನ ಕಂಡರೆ ಸಹಿಸೋಕೆ ಆಗುತ್ತಿಲ್ಲ. ಮೋದಿ ಅಮಿತ್ ಶಾಗೂ ಸಿದ್ದರಾಮಯ್ಯ ಅವರೇ ಟಾರ್ಗೆಟ್ . ಕರ್ನಾಟಕ ಅಂದ್ರೆ ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡ್ತಾರೆ ಎಂದು ನುಡಿದರು.

Key words: Siddaramaiah-  next CM-chamarajapet-MLA- Zameer Ahmed Khan.

ENGLISH SUMMARY…

Siddaramaiah should become the next CM: I am ready to sacrifice my seat in Chamarajpet – MLA Zamir Ahmed Khan
Bengaluru, December 5, 2022 (www.justkannada.in): “Siddaramaiah should become the next Chief Minister of the State. However, the final decision is left to the high command. I am ready to sacrifice my candidature from Chamarajpet,” said Congress MLA Zamir Ahmed Khan.
Speaking to the media persons today, Zamir Ahmed Khan said, “let Siddaramaiah contest from Chamarajpet. I invite him to contest from here. I am ready to sacrifice my candidature for him. Siddaramaiah is the son-in-law of Chamarajpet and I am the son of Chamarajpet. If he contests from here, he will definitely win.”
“I belong to here. I will win whoever may contest opposite me here. Let H.D. Kumaraswamy and BJP people field anyone. I will definitely win. Will the people of my constituency disown me?,” he said.
Keywords: Zamir Ahmed Khan/ Siddaramaiah/ next CM/ Chamarajpet