ಬೆಳಗಾವಿ ‘ಅಸ್ಮಿತೆ’ ಮೇಳದಲ್ಲಿ ದಾಖಲೆಯ ರೂ.60 ಲಕ್ಷ ವಹಿವಾಟು.

ಬೆಂಗಳೂರು,ಡಿಸೆಂಬರ್,27,2021(www.justkannada.in):  ಬೆಳಗಾವಿಯಲ್ಲಿ ಈಚೆಗೆ ಏರ್ಪಡಿಸಿದ್ದ (ಡಿ.15ರಿಂದ 20ರವರೆಗೆ) ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ‘ಅಸ್ಮಿತೆ’ಯಲ್ಲಿ ದಾಖಲೆಯ ಸುಮಾರು 60 ಲಕ್ಷ ರೂಪಾಯಿಗಳ ವಹಿವಾಟು ನಡೆದಿದೆ ಎಂದು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆಯಲ್ಲಿ ತಿಳಿಸಿರುವ ಸಚಿವ ಅಶ್ವಥ್ ನಾರಾಯಣ್, ಮುಖ್ಯಮಂತ್ರಿ ಅವರು ಉದ್ಘಾಟಿಸಿದ್ದ ಈ ಮೇಳದಲ್ಲಿ 7 ಆಹಾರ ಮಳಿಗೆಗಳೂ ಸೇರಿದಂತೆ ಒಟ್ಟು 140 ಮಳಿಗೆಗಳು ಭಾಗವಹಿಸಿದ್ದವು. ಇದುವರೆಗೆ ಈ ರೀತಿಯ ಮೇಳಗಳಲ್ಲಿ ಆಗಿರುವ ಅತಿ ಹೆಚ್ಚು ವಹಿವಾಟು ಇದಾಗಿದ್ದು, ಇದಕ್ಕಾಗಿ‌ ಶ್ರಮಿಸಿದ ಎಲ್ಲ ಅಧಿಕಾರಿಗಳು, ಸಿಬ್ಬಂದಿಗೆ ಅವರು ಅಭಿನಂದನೆ ಸಲ್ಲಿಸಿದರು.

ಸೆಣಬಿನ ಬ್ಯಾಗುಗಳನ್ನು ಮಾಡುವ ವಿಜಯಪುರ ಎನ್.ಆರ್.ಎಲ್.ಎಂ.ನ ಯಶೋಧಾ ಸ್ವಸಹಾಯ ಗುಂಪು ಎಲ್ಲಕ್ಕಿಂತ ಹೆಚ್ಚು ರೂ. 1,26,900 ವ್ಯಾಪಾರ ನಡೆಸಿದೆ. ನಂತರದ ಸ್ಥಾನದಲ್ಲಿ, ಕಾಟನ್ ಬ್ಯಾಗುಗಳು ಮತ್ತು ಕ್ವಿಲ್ಟ್ ಗಳನ್ನು ಮಾಡುವ ಬೆಳಗಾವಿಯ ಮಾತಾ ಸಾವಿತ್ರಿ ಬಾಯಿ ಸ್ವಸಹಾಯ ಸಂಘ ರೂ 1,19,558, ವುಡ್ ಇನ್ ಲೇಗಳನ್ನು ಮಾಡುವ ಮೈಸೂರಿನ ಚಾಮುಂಡೇಶ್ವರಿ ಸ್ವಸಹಾಯ ಸಂಘ ರೂ 1,13,830, ಇಳಕಲ್ ಸೀರೆಗಳನ್ನು ಮಾಡುವ ಶ್ರೀ ರೇವಣ್ಣಸಿದ್ದೇಶ್ವರ ಸ್ವಸಹಾಯ ಸಂಘ ರೂ 1,00,026 ಹಾಗೂ ಆಭರಣ ಮತ್ತು ಪೇಟಿಂಗ್ ಗಳನ್ನು ಮಾಡುವ ಬೆಳಗಾವಿಯ ಜನವಾಣಿ ಮಾತಾ ಸ್ವಸಹಾಯ ಸಂಘವು ರೂ 87,420 ಮೊತ್ತದ ವ್ಯಾಪಾರಗಳನ್ನು ಮಾಡಿವೆ ಎಂದು ಸಚಿವರು ವಿವರಿಸಿದ್ದಾರೆ.

ರಾಜ್ಯ ಜೀವನೋಪಾಯ ಅಭಿಯಾನ (ನಗರ ಮತ್ತು ಗ್ರಾಮೀಣ), ಕೌಶಲಾಭಿವೃದ್ಧಿ- ಉದ್ಯಮಶೀಲತೆ – ಜೀವನೋಪಾಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಈ ಮೇಳವನ್ನು ನಡೆಸಲಾಗಿತ್ತು. ಬೇಕರಿ ಹಾಗೂ ಇತರೆ ಲಘು ತಿನಿಸುಗಳು, ಬಗೆಬಗೆಯ ಉಪ್ಪಿನಕಾಯಿಗಳು, ಹೈನು ತಿನಿಸುಗಳು, ಮಸಾಲೆ ಪದಾರ್ಥಗಳು, ಉಡುಪುಗಳು, ಸೀರೆಗಳು, ವಿವಿಧ ರೀತಿಯ ಹಾರಗಳು, ಚರ್ಮ ಹಾಗೂ ಕೂದಲು ಆರೈಕೆ ಉತ್ಪನ್ನಗಳು, ಸ್ಯಾನಿಟೇಷನ್ ಉತ್ಪನ್ನಗಳು ಸೇರಿದಂತೆ ಹಲವು ಉತ್ಪನ್ನಗಳು ಹಾಗೂ ಕೈಕುಸುರಿ ವಸ್ತುಗಳನ್ನು ಇಲ್ಲಿ ಪ್ರದರ್ಶಿಸುವ ಜೊತೆಗೆ ಮಾರಾಟಕ್ಕೆ ಇಡಲಾಗಿತ್ತು.

ENGLISH SUMMARY…

Belagavi Trade Fair ‘Asmite’ sees a record sales worth Rs 60 Lakh

Bengaluru: The sales at the recently held ‘Belagavi Trade fair’-Asmite- stood at a record high of about Rs 60 lakh, Dr.C.N.Ashwatha Narayana, Minister for Skill Development, Entrepreneurship & Livelihood, stated on Monday.

In the 6 day fair (Dec 15- Dec 20) organised for products made by women of Self Help Groups (SHGs) as many as 140 stalls were installed including 7 food stalls. In all they have achieved sales of Rs 60 lakhs/- including the order bookings, he told.

Yashoda SHG from NRLM Vijayapura which is engaged in making Jute bags which attained first place has made sales worth Rs 1,26,900/-. Mata Savitri Bai SHG of Belagavi which makes cotton bags and quilts with Rs.1,19,558/-, Chamundeshwari SHG, Mysuru which does wood inlay with Rs 1,13,830/-, Sri Revansiddeshwar SHG, Bagalkote which makes Ilakal sarees with Rs 1,00,626/-, Janavani matha SHG, Belagavi which makes jewelry and paintings with Rs. 87,420/- are in the following spots.

The Chief Minister Basavaraja Bommai had inaugurated the fair jointly organised by State Livelihood Mission (Rural & Urban), Dept of Skill Development-Entrepreneurship- Livelihood, and Dept of Women & Child Welfare. Many items including Jute & Cloth Bags, Chappals, Purses, Snacks/Bakery products, Dairy products/Cakes, Different varieties of pickles, Different types of Rotis, Spices/Masala Powders, Dresses for children, ladies and gents, Sarees, Garlands made of different materials, Skincare / Hair oils, Cleaning & sanitation products / Soaps, Different types of hand made home decors made up of bamboo, jute, banana fiber, etc / Art & craft items, Paintings were showcased.

Key words: Belgaum-asmithe mela- Record -turnover – Rs 60 lakh