ಕೋಲಾರಕ್ಕೆ ಶಾಸಕ ಯತೀಂದ್ರ ಸಿದ್ಧರಾಮಯ್ಯ ಭೇಟಿ.

ಕೋಲಾರ,ಜನವರಿ,30,2023(www.justkannada.in): ವಿಪಕ್ಷ ನಾಯಕ ಸಿದ್ದರಾಮಯ್ಯ ಈಗಾಗಲೇ  ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದು ಈ ನಡುವೆ ಇಂದು ಅವರ ಪುತ್ರ ಶಾಸಕ ಯತೀಂದ್ರ ಸಿದ್ಧರಾಮಯ್ಯ ಕೋಲಾರಕ್ಕೆ ಭೇಟಿ ನೀಡಿದ್ದಾರೆ.

ಡಾ.ಯತೀಂದ್ರ ಸಿದ್ದರಾಮಯ್ಯ ಭೇಟಿ ಭಾರೀ ಕುತೂಹಲ ಕೆರಳಿಸಿದೆ. ಇಂದು ಕೋಲಾರಕ್ಕೆ  ಶಾಸಕ ಯತೀಂದ್ರ ಸಿದ್ಧರಾಮಯ್ಯ ಭೇಟಿ ನೀಡಿದರು. ಕೋಲಾರಮ್ಮ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಯತೀಂದ್ರರಿಗೆ ಅನಿಲ್ ಸೇರಿ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.

ನಂತರ ಹೊನ್ನೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಯತೀಂದ್ರ ಸಿದ್ಧರಾಮಯ್ಯ ಭೇಟಿ ನೀಡಲಿದ್ದು, ಮಧ್ಯಾಹ್ನ ಕ್ಲಾಕ್ ಟವರ್ ದರ್ಗಾಗೆ ಭೇಟಿ, ಅಲ್ಪಸಂಖ್ಯಾತರ ಸಭೆ ನಡೆಸಲಾಗುತ್ತದೆ. ಡಾ.ಯತೀಂದ್ರ ಇದೇ ಮೊದಲ ಬಾರಿ ಕೋಲಾರಕ್ಕೆ ಭೇಟಿ ನೀಡುತ್ತಿದ್ದಾರೆ.

Key words: kolar-MLA-Yathindra siddaramaiah-visit