Thursday, September 17, 2026

BDA Apartments

ಬಿಸಿಸಿಐ ಮಧ್ಯಂತರ ಸಿಇಓ ಆಗಿ ಹೆಮಂಗ್‌ ಅಮಿನ್‌ ನೇಮಕ BDA JK_Adv BDA Adv
Home Front Page ಬಿಸಿಸಿಐ ಮಧ್ಯಂತರ ಸಿಇಓ ಆಗಿ ಹೆಮಂಗ್‌ ಅಮಿನ್‌ ನೇಮಕ

ಬಿಸಿಸಿಐ ಮಧ್ಯಂತರ ಸಿಇಓ ಆಗಿ ಹೆಮಂಗ್‌ ಅಮಿನ್‌ ನೇಮಕ

ನವದೆಹಲಿ, ಜುಲೈ 15, 2020 (www.justkannada.in): ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಮಂಗ್ ಅಮಿನ್‌ ಅವರನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಮಧ್ಯಂತರ ಸಿಇಓ ಆಗಿ ಬಿಸಿಸಿಐ ನೇಮಕ ಮಾಡಿದೆ.

ಕಳೆದ ವಾರ ರಾಹುಲ್‌ ಜೊಹ್ರಿ ಅವರ ಸಿಇಓ ಹುದ್ದೆಯ ರಾಜೀನಾಮೆಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಂಗೀಕರಿಸಿತ್ತು. ಹಲವು ತಿಂಗಳುಗಳ ಹಿಂದೆಯೇ ರಾಹುಲ್ ಜೊಹ್ರಿ ಬಿಸಿಸಿಐ ಸಿಇಓ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಅವರ ರಾಜೀನಾಮೆಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಇತ್ತೀಚಿಗೆ ಸ್ವೀಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಶಶಾಂಕ್‌ ಮನೋಹರ್‌ ಅಧ್ಯಕ್ಷರಾಗಿದ್ದಾಗ 2016ರಲ್ಲಿಯೇ ರಾಹುಲ್‌ ಜೊಹ್ರಿ ಅವರನ್ನು ಬಿಸಿಸಿಐ ಸಿಇಓ ಹುದ್ದೆಗೆ ನೇಮಕ ಮಾಡಲಾಗಿತ್ತು. ಕಳೆದ 4 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಜೊಹ್ರಿ, ಬಿಸಿಸಿಐ ಹುದ್ದೆಯಿಂದ ದೂರ ಉಳಿಯಲು ಕಳೆದ ಹಲವು ತಿಂಗಳುಗಳ ಹಿಂದೆಯೇ ನಿರ್ಧರಿಸಿ ರಾಜೀನಾಮೆ ಸಲ್ಲಿಸಿದ್ದರು.