ಕಿಚ್ಚ ಸುದೀಪ್ ‘ಫ್ಯಾಂಟಮ್’ಗೆ ವಿಲಿಯಮ್ ಡೇವಿಡ್ ಕ್ಯಾಮರಾ ಕೈಚಳಕ

ನವದೆಹಲಿ, ಜುಲೈ 15, 2020 (www.justkannada.in): ಸುದೀಪ್ ಚಿತ್ರ ಫ್ಯಾಂಟಮ್  ಗೆ ವಿಲಿಯಮ್ ಡೇವಿಡ್ ಕ್ಯಾಮರಾಮ್ಯಾನ್ ಆಗಿ ಕೈಚಳಕ ತೋರಲಿದ್ದಾರೆ.

ವಿಲಿಯಮ್ ಡೇವಿಡ್ ಅನೂಪ್ ಭಂಡಾರಿಯ ಈ ಹಿಂದಿನ ನಿರ್ದೇಶನದ ರಂಗಿತರಂಗ ಮತ್ತು ರಾಜರಥಕ್ಕೆ ಸಹ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡಿದ್ದರು.

ಕೋವಿಡ್-19 ಸೋಂಕಿನ ಮಧ್ಯೆ ಶೂಟಿಂಗ್ ನಡೆಯುತ್ತಿರುವ ಮೊದಲ ಕನ್ನಡ ಚಿತ್ರ ಫ್ಯಾಂಟಮ್ ಆಗಿದೆ. ಶಿವಕುಮಾರ್ ಅವರು ಕಲಾ ವಿಭಾಗದ ಜವಾಬ್ದಾರಿ ಹೊತ್ತುಕೊಂಡಿದ್ದು ತೆಲಂಗಾಣದಲ್ಲಿ ಅನ್ನಪೂರ್ಣ ಸ್ಟುಡಿಯೊದಲ್ಲಿ ಅತಿದೊಡ್ಡ ಸೆಟ್ ಹಾಕಲಾಗಿದೆ.