ಫ್ರೆಂಚ್ ಬಿರಿಯಾನಿ ಸಿನಿ ಪ್ರಿಯರಿಗೆ ಬಡಿಸಲು ರೆಡಿ!

ಬೆಂಗಳೂರು, ಜುಲೈ 15, 2020 (www.justkannada.in): ಪುನೀತ್ ರಾಜ್ ಕುಮಾರ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಮತ್ತೊಂದು ‌ಚಿತ್ರ ಇದೀಗ ಒಟಿಟಿ‌ ರಿಲೀಸ್ ಗೆ ಸಿದ್ಧವಾಗಿದೆ.

ಪುನೀತ್ ಅವರ ಬ್ಯಾನರ್ ಅಡಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ನಿರ್ಮಾಣದ ಫ್ರೆಂಚ್ ಬಿರಿಯಾನಿ ಚಿತ್ರ ‌ನೇರವಾಗಿ ಒಟಿಟಿ‌ ಬಿಡುಗಡೆಗೆ ಸಿದ್ಧವಾಗ್ತಿದೆ. ಖ್ಯಾತ ನಿರ್ದೇಶಕ ಟಿ. ಎಸ್ ನಾಗಾಭರಣ ಅವರ ಮಗ ಪನ್ನಗಾಭರಣ ಈ ಚಿತ್ರವನ್ನು‌ ನಿರ್ದೇಶಿಸಿದ್ದು, ಅವಿನಾಶ್ ಬಲೆಕ್ಕಳ ಕಥೆ-ಚಿತ್ರಕಥೆ ಬರೆದಿದ್ದಾರೆ.

ರಂಗಾಯಣ ರಘು, ದಿಶಾ ಮದನ್, ಡ್ಯಾನಿಶ್ ಸೇಠ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕಾಮಿಡಿ ಡ್ರಾಮಾ ಚಿತ್ರ ಇದಾಗಿದ್ದು ವಾಸುಕಿ ವೈಭವ್ ಸಂಗೀತ ನಿರ್ದೇಶಿಸಿದ್ದಾರೆ.