ಬೆಂಗಳೂರು ಲಾಕ್’ಡೌನ್: ಧಾರವಾಹಿ ಚಿತ್ರೀಕರಣ ಶಟ್ಡೌನ್ !

ಬೆಂಗಳೂರು, ಜುಲೈ 15, 2020 (www.justkannada.in): ಬೆಂಗಳೂರಿನಲ್ಲಿ ಲಾಕ್ ಡೌನ್ ಘೋಷಣೆಯಾಗಿರುವುದರಿಂದ ಶೂಟಿಂಗ್ ಕೂಡಾ ಸ್ಥಗಿತಗೊಂಡಿವೆ.

ಹೌದು. ಬೆಂಗಳೂರು ಮತ್ತೆ ಒಂದು ವಾರ ಕಾಲ ಲಾಕ್ ಡೌನ್ ಘೋಷಿಸಿರುವುದು ಕನ್ನಡ ಕಿರುತೆರ ಉದ್ಯಮದ ಮೇಲೂ ಪ್ರಭಾವ ಬೀರಲಿದೆ. ಕಳೆದ ಮೇ ಅಂತ್ಯದಲ್ಲಷ್ಟೇ ಧಾರವಾಹಿಗಳು ಮರಳಿ ಶೂಟಿಂಗ್ ಪ್ರಾರಂಭಿಸಿದ್ದವು.

ಆದರೆ ಈಗ ಮತ್ತೆ ಹೀಗಾಗಿ ಧಾರವಾಹಿ ತಂಡಗಳು ತಮ್ಮಿಂದಾದಷ್ಟು ಹೊಸ ಎಪಿಸೋಡ್ ಗಳ ಬ್ಯಾಂಕಿಂಗ್ ಮಾಡಿಟ್ಟುಕೊಂಡಿವೆ. ಇನ್ನು ಒಂದು ವಾರದ ಬಳಿಕ ಸರ್ಕಾರ ಒಪ್ಪಿಗೆ ಕೊಟ್ಟರೆ ಮಾತ್ರ ಶೂಟಿಂಗ್ ಪುನರಾರಂಭವಾಗಲಿದೆ. ಅಲ್ಲಿಯವರೆಗೆ ಈಗ ಶೂಟಿಂಗ್ ಆದ ಎಪಿಸೋಡ್ ಗಳನ್ನು ಮಾತ್ರ ಪ್ರಸಾರ ಮಾಡಲಾಗುತ್ತದೆ.