ಲಾಕ್ ಡೌನ್ ಮುಗಿಯುವವರೆಗೆ ಇಲ್ಲ ಬೆಂಗಳೂರು-ಮೈಸೂರು ಬಸ್ ಸಂಚಾರ…

ಮೈಸೂರು,ಜು,15,2020(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆ ಒಂದು ವಾರ ಲಾಕ್ ಡೌನ್ ಮಾಡಲಾಗಿದ್ದು, ಈ ಹಿನ್ನೆಲೆ ಇಂದಿನಿಂದ ಮೈಸೂರು ಜಿಲ್ಲೆಯೊಳಗೆ ಮಾತ್ರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ನಡೆಸಲಿವೆ.jk-logo-justkannada-logo

ಬೆಂಗಳೂರಿನಲ್ಲಿ ಲಾಕ್ ಡೌನ್ ಮುಗಿಯುವವರೆಗೂ ಬೆಂಗಳೂರು- ಮೈಸೂರು ನಡುವೆ ಬಸ್ ಸಂಚಾರ ಇರುವುದಿಲ್ಲ. ಮೈಸೂರು ಜಿಲ್ಲೆಯ ಲೋಕಲ್ ಟ್ರಿಪ್‌ಗಳನ್ನು ಮಾತ್ರ ನಡೆಸಲು ಸಾರಿಗೆ ಸಂಸ್ಥೆ ನಿರ್ಧಾರ ಮಾಡಿದೆ.  ಇತರ ಜಿಲ್ಲೆಗಳಿಗೆ ಅಗತ್ಯ ಪ್ರಯಾಣಿಕರು ಬಂದರೆ ಮಾತ್ರ ಬಸ್ ಸೇವೆ ಒದಗಿಸಲಿದೆ.no-bus-bangalore-mysore-lockdown

ಆದರೂ ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಿಂದ ಮೈಸೂರಿಗೆ ಬಸ್ ಸಂಚರಿಸುತ್ತಿದ್ದು, ಮಂಡ್ಯ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ ಬಸ್‌ಗಳು ಬಂದು ಹೋಗುತ್ತಿವೆ. ಆದರೆ ಲಾಕ್ ಡೌನ್ ಹಿನ್ನೆಲೆ ಬೆಂಗಳೂರಿಗೆ ಮಾತ್ರ ಬಸ್ ಸಂಚಾರವಿರುವುದಿಲ್ಲ.

Key words: No-bus- Bangalore-Mysore – lockdown