ಹಣ ಸರಕಾರದ್ದು, ನಿರ್ವಹಣೆ ಖಾಸಗಿಯದ್ದು : ಬಿಬಿಎಂಪಿ ಶಾಲೆ ಜವಾಬ್ದಾರಿ ಖಾಸಗಿ ಶಿಕ್ಷಣ ಸಂಸ್ಥೆಗೆ  : ಡಿಸಿಎಂ ಡಾ.ಅಶ್ವತ್ಥನಾರಾಯಣ

kannada t-shirts

 

ಬೆಂಗಳೂರು, ಜ.23, 2020 : (WWW.JUSTKANNADA.IN NEWS ) ಇಲ್ಲಿನ ಕೋದಂಡರಾಮಪುರದ ಬಿಬಿಎಂಪಿ ಶಾಲೆಯ ನಿರ್ವಹಣೆ ಮತ್ತು ಮೇಲ್ವಿಚಾರಣೆ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಡಿಸಿಎಂ ಡಾ. ಅಶ್ವತ್ ನಾರಾಯಣ ಅವರು ಮಾಡಿದ ಮನವಿಗೆ ಮಲ್ಲೇಶ್ವರದ ಶ್ರೀ ವಿದ್ಯಾಮಂದಿರ ಎಜುಕೇಶನ್ ಸೊಸೈಟಿ ಸಮ್ಮತಿಸಿತು.

ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಗುರುವಾರ ಶ್ರೀ ವಿದ್ಯಾಮಂದಿರ ಎಜುಕೇಷನ್‌ ಸೊಸೈಟಿಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಈ ಕುರಿತು ಮಾಡಿಕೊಂಡ ಮನವಿಗೆ ಎಜುಕೇಶನ್ ಸೊಸೈಟಿ ಸಮ್ಮತಿಸಿದೆ.

BBMP-school-private-DCM-ashwathanarayana-bangalore

ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ , ಕೋದಂಡರಾಮಪುರ ಬಿಬಿಎಂಪಿ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶಾಲೆಯನ್ನು ದತ್ತು ಪಡೆಯಬೇಕು ಎಂದು ಶ್ರೀ ವಿದ್ಯಾಮಂದಿರ ಎಜುಕೇಶನ್ ಸೊಸೈಟಿ ಮುಖ್ಯಸ್ಥರನ್ನು ಕೇಳಿಕೊಂಡರು. ಆಗ ಸೋಸೈಟಿಯ  ಲೀಲಾವತಿ , ಸುವರ್ಣ ಮಹೋತ್ಸವದ ಕೊಡುಗೆಯಾಗಿ ನಾವು ಈ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.

ಕೋದಂಡರಾಮಪುರ ಸರ್ಕಾರಿ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಹಣಕಾಸು ನೆರವನ್ನು ಬಿಬಿಎಂಪಿ ನೀಡುತ್ತದೆ. ಸಂಸ್ಥೆಯ ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ವಿದ್ಯಾಮಂದಿರ ಎಜುಕೇಶನ್ ಸೊಸೈಟಿ ನೋಡಿಕೊಳ್ಳಲಿದೆ. ಇದೇ ರೀತಿ ಬಿಬಿಎಂಪಿ ವ್ಯಾಪ್ತಿಯ ಇನ್ನಷ್ಟು ಶಾಲೆಗಳನ್ನು ಖಾಸಗಿಯವರ ಸಹಕಾರದೊಂದಿಗೆ ಅಭಿವೃದ್ಧಿಪಡಿಸಿ ಗುಣಮಟ್ಟದ ಶಿಕ್ಷಣ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಅಶ್ವಥನಾರಾಯಣ್ ತಿಳಿಸಿದರು.

BBMP-school-private-DCM-ashwathanarayana-bangalore

ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದ ಪ್ರತಿನಿಧಿಯಾಗಿ ನಾನು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರು, ಅತ್ಯುತ್ತಮ ಸಂಪ್ರದಾಯ ಮತ್ತು ಶಿಕ್ಷಣವನ್ನು ಶಿಕ್ಷಣ ಸಂಸ್ಥೆಗಳು ಪರಸ್ಪರ ಹಂಚಿಕೊಳ್ಳುವ ಕೆಲಸ ಮಾಡಬೇಕು. ಆಗ ಕ್ಷೇತ್ರದಲ್ಲಿ ಹೆಚ್ಚಿನ ಸುಧಾರಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಭಾರತರತ್ನ ಪುರಸ್ಕೃತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್, ಎಜುಕೇಷನ್ ಸೊಸೈಟಿಯ ಸಂಸ್ಥಾಪಕರಾದ ಲೀಲಾವತಿ, ಆಡಳಿತ ಮಂಡಳಿ ಅಧ್ಯಕ್ಷ ಸತ್ಯನಾರಾಯಣ ರಾವ್ ಸೇರಿದಂತೆ ಶಿಕ್ಷಕರು, ಪ್ರಮುಖರು ಹಾಜರಿದ್ದರು.

Key words : BBMP-school-private-DCM-ashwathanarayana-bangalore

 

website developers in mysore