ಸಾರ್ವಜನಿಕರ ಜೀವ ಹಾನಿ ಕೃತ್ಯ ಎಸಗುವ ‘  ಬಾಂಬರ್ ‘ ಗಳಿಗೆ ಗುಂಡಿಕ್ಕಬೇಕು : ಸಚಿವ ಶ್ರೀರಾಮುಲು

 

ಮೈಸೂರು, ಜ.23, 2020 : (www.justkannada.in news ) ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ. ಇಂತಹ ಅಪರಾಧಿಯನ್ನು ಸೂಟ್ ಅಟ್ ಸೈಟ್ ಮಾಡಬೇಕು. ಮೈಸೂರಿನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ.

ಸಮಾಜಘಾತುಕ ಶಕ್ತಿಗಳನ್ನು ಬೆಳೆಯಲು ಬಿಡಬಾರದು. ಕೆಲವರು ಶೋಕಿ, ಪ್ರಚಾರದ ಆಸೆಗಾಗಿ ಹೀಗೆಲ್ಲಾ ಮಾಡುತ್ತಾರೆ. ಮಾನಸಿಕ ಸ್ಥಿಮಿತತೆ ಕಳೆದುಕೊಂಡವರು ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದನ್ನೂ ಗಮನಿಸಿದ್ದೇವೆ. ಆದ್ದರಿಂದ ಅಂತಹ ವ್ಯಕ್ತಿಗಳನ್ನು ಕಂಡಲ್ಲಿ ಗುಂಡಿಕ್ಕಿಕೊಲ್ಲಬೇಕು. ಮೈಸೂರಿನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ.

ಮಂಗಳೂರು ಬಾಂಬ್ ಪ್ರಕರಣ ದ ಬಗ್ಗೆ ಹೆಚ್ ಡಿ ಕೆ ಹೇಳಿಕೆ ವಿಚಾರ. ಮಾಜಿ ಸಿಎಮ್ ಕುಮಾರಸ್ವಾಮಿ ಸ್ವಲ್ಪ ಸೀರಿಯಸ್‌ನೆಸ್ ಕಲಿಯಬೇಕು ಎಂದು ಕಿವಿಮಾತು ಹೇಳಿದ ಸಚಿವ ಶ್ರೀರಾಮುಲು.

ಕುಮಾರಸ್ವಾಮಿಗೆ  ಸೀರಿಯಸ್ ನೆಸ್ ಇಲ್ಲ ಅಂತ ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೀನಿ. ಯಾವ ವಿಚಾರ ಗೇಲಿ ಮಾಡಬೇಕು, ಯಾವ ವಿಚಾರವನ್ನು ಗಂಭೀರವಾಗಿ ಮಾತನಾಡಬೇಕು ಎಂಬುದನ್ನು ಕಲಿತುಕೊಳ್ಳಬೇಕು. ಹಿಂದೆ ಸೈನಿಕರ ಬಗ್ಗೆ ಹಗುರವಾಗಿ ಮಾತನಾಡಿದ್ದರು.  ಈಗ ಬಾಂಬ್ ಪತ್ತೆ ಬಗ್ಗೆ ಗೇಲಿ ಮಾಡಿದ್ದಾರೆ. ಇವರು ಮಾಜಿ ಪ್ರಧಾನಿ ಮಗ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ಮಂಗಳೂರು ಗಲಭೆ ಪ್ರಕರಣಗಳಲ್ಲಿ ಎಸ್ಡಿಪಿಐ, ಪಿಎಫ್ಐ ಸಂಘಟನೆಗಳ ಕೈವಾಡವರುವ ಬಗ್ಗೆ ಅನುಮಾನವಿದೆ. ಮೈಸೂರಿನಲ್ಲಿ ತನ್ವೀರ್ ಸೇಠ್, ಬೆಂಗಳೂರಿನಲ್ಲಿ ಹ್ಯಾರಿಸ್ ಮೇಲೆ ಹಲ್ಲೆಯಾಗಿದೆ. ಜನಪ್ರತಿನಿಧಿಗಳನ್ನೇ ಗುರಿಯಾಗಿಸಿಕೊಂಡು ಹಲ್ಲೆ ಮಾಡಿದ್ದಾರೆ. ಸಮಾಜದ ಶಾಂತಿ ಕದಡುವ ವ್ಯಕ್ತಿ ಯಾರೆ ಆಗಿರಲಿ, ಯಾವುದೇ ಪಕ್ಷ, ಸಂಘಟನೆಯಾಗಿರಲಿ ಅವರ ವಿರುದ್ಧ ಶಿಸ್ತು ಕ್ರಮ ಆಗಬೇಕು. ಮೈಸೂರಿನಲ್ಲಿ ಸಚಿವ ಶ್ರೀರಾಮುಲು ಆಗ್ರಹ.

ಮೈಸೂರಿನಲ್ಲಿ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಲೋಕಾರ್ಪಣೆ ಮಾಡಿದ ಸಚಿವ ಶ್ರೀರಾಮುಲು. 70ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 5ಅಂತಸ್ಥಿನ ಕಟ್ಟಡ.

ಸುಮಾರು 300ಬೆಡ್ ಗಳನ್ನು ಹೊಂದಿರುವ ಅಸ್ಪತ್ರೆ. ಹೊರರೋಗಿಗಳ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ, ರಕ್ತನಿಧಿ, ಪೋಸ್ಟ್ ಆಪರೇಟಿಂಗ್ ವಾರ್ಡ್, ಫಿಜಿಯೋ ಥೆರಪಿ ಸೇರಿ ಅತ್ಯಾಧುನಿಕ ಸೌಲಭ್ಯವುಳ್ಳ ಜಿಲ್ಲಾಸ್ಪತ್ರೆ.

 

Key words : mysore-district-hospital-bomber-shoot-at-sight-sriramulu-bjp