ಬೆಂಗಳೂರಿನಲ್ಲಿ ಪೊಲೀಸರ ಭರ್ಜರಿ ಬೇಟೆ: 6.ಕೆ.ಜಿ ಚಿನ್ನಾಭರಣ ಜಪ್ತಿ: ಇಬ್ಬರ ಬಂಧನ…

ಬೆಂಗಳೂರು,ನವೆಂಬರ್,21,2020(www.justkannada.in): ಬೆಂಗಳೂರಿನ  ಸಿಟಿ ಮಾರ್ಕೆಟ್ ಠಾಣಾ ಪೊಲೀಸರು ಭರ್ಜರಿ ಚಿನ್ನಾಭರಣ  ಬೇಟೆಯಾಡಿದ್ದು  6.ಕೆ.ಜಿ ಚಿನ್ನಾಭರಣ ಜಪ್ತಿ ಮಾಡಿ ಇಬ್ಬರ ಆರೋಪಿಗಳನ್ನ ಬಂಧಿಸಿದ್ದಾರೆ.kannada-journalist-media-fourth-estate-under-loss

ದಲ್ಬತ್ ಸಿಂಗ್ ಮತ್ತು ವಿಕಾಶ್ ಬಂಧಿತರು. ಬಂಧಿತರಿಂದ 6.ಕೆ.ಜಿ 55 ಗ್ರಾಂ ಚಿನ್ನಾಭರಣವನ್ನ ಸಿಟಿ ಮಾರ್ಕೆಟ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿಗಳು ಕಾರಿನಲ್ಲಿ ಚಿನ್ನಾಭರಣ ಸಾಗಿಸುತ್ತಿದ್ದರು. ಈ ವೇಳೆ ನೈಟ್ ಬೀಟ್ ಪೊಲೀಸರು ಪರಿಶೀಲಸಿದ್ದು, ಇದನ್ನ ಕೋಟೆಡ್ ಗೋಲ್ಡ್ ಎಂದು ಆರೋಪಿಗಳು ಸುಳ್ಳು ಹೇಳಿದ್ದರು.bangalore-police-6-kg-gold-sieze-arrest-tow

ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದಾಗ ಅಸಲಿ ಚಿನ್ನಾಭರಣ ಎಂದು ಪತ್ತೆಯಾಗಿದೆ.  ಬ್ಯಾಗ್ ನಲ್ಲಿ 65 ನಕ್ಲೇಸ್, 7 ಜತೆ ಬಳೆ, 150 ಗ್ರಾಂ ಓಲೆ  ಪತ್ತೆಯಾಗಿದ್ದು ಅವುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊರಿಯರ್ ಮೂಲಕ ಆರೋಪಿಗಳು ಚಿನ್ನಾಭರಣ ತರಿಸಿದ್ದರು ಎನ್ನಲಾಗಿದೆ.

ಈ ಸಂಬಂಧ ಸಿಟಿ ಮಾರ್ಕೆಟ್ ಠಾಣೆಯ ಇನ್ಸ್ ಪೆಕ್ಟರ್ ತನಿಖೆ ನಡೆಸುತ್ತಿದ್ದು ಈ ಕುರಿತು ಮತ್ತಷ್ಟು ವಿವರಗಳು ಹೊರಬರಬೇಕಿದೆ.

Key words: Bangalore- Police – 6.KG-gold- sieze- arrest-tow