ಕೆ.ಆರ್ ಮಾರ್ಕೆಟ್ ಪುನಾರಂಭಿಸುವಂತೆ ಆಗ್ರಹ: ರೈತರಿಂದ ಪ್ರತಿಭಟನೆ…

Promotion

ಬೆಂಗಳೂರು,ಆ,24,2020(www.justkannada.in):   ಕೊರೋನಾ ಮಹಾಮರಿ, ಲಾಕ್ ಡೌನ್ ಹಿನ್ನೆಲೆ ಬಂದ್ ಮಾಡಲಾಗಿದ್ದ ಕೆ.ಆರ್ ಮಾರ್ಕೆಟ್ ಮತ್ತು ಕಲಾಸಿಪಾಳ್ಯ ಮಾರುಕಟ್ಟೆಯನ್ನು ಪುನಾರಂಭಿಸುವಂತೆ ಆಗ್ರಹಿಸಿ ಇಂದು ರೈತರು ಪ್ರತಿಭಟನೆ ನಡೆಸಿದರು.jk-logo-justkannada-logo

ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಬಳಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿ ಕೆ.ಆರ್ ಮಾರ್ಕೆಟ್ ಮತ್ತು ಕಲಾಸಿಪಾಳ್ಯ ಮಾರುಕಟ್ಟೆ ಪುನಾರಂಭಿಸುವಂತೆ ಆಗ್ರಹಿಸಿದರು.bangalore-kr-market-reopen-protest-farmer

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್,  ದರೋಡೆಕೋರ ರೀತಿ ವರ್ತನೆ ಬೇಡ. ಸರ್ಕಾರ ಎಚ್ಚೆತ್ತುಕೊಳ್ಳಲಿ. ಸರ್ಕಾರ ಮಾರ್ಕೆಟ್ ಓಪನ್ ಮಾಡದಿದ್ದರೇ ನಾಳೆಯೂ ಪ್ರತಿಭಟನೆ ನಡೆಸುತ್ತೇವೆ. ಸಿಎಂ ಮನೆ ಮುಂದೆ ನಿಂತು ಜೋಳಿಗೆ ಹಿಡಿದು ಬೇಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Key words: Bangalore- KR Market- reopen-Protest –farmer