ಕ್ವಾರಂಟೈನ್ ಕಾರಣದಿಂದ ತಾಯಿ ಅಂತ್ಯಸಂಸ್ಕಾರಕ್ಕೂ ಹೋಗಲಾಗಲಿಲ್ಲ ಈ ಪತ್ರಕರ್ತನಿಗೆ

 

ಬೆಂಗಳೂರು, ಏ.26, 2020 : ( www.justkannada.in news ) : ಕರೋನ ಸಂಕಟ ಇದೀಗ ಸುದ್ದಿಮನೆಯ ಹೊಸ್ತಿಲನ್ನು ತಟ್ಟಿದ್ದು ಕರುಳು ಹಿಂಡುವ ಘಟನೆಗೆ ಕಾರಣವಾಗಿದೆ. 9 ತಿಂಗಳು ಹೆತ್ತು ಹೊತ್ತು ಜೋಪಾನ ಮಾಡಿ‌ ಇಷ್ಟು ದಿನ ಸಾಕಿದ ತಾಯಿಯನ್ನು ಕೊನೆಗಾಲದಲ್ಲಿ ನೋಡಲು ಆಗದಂತ ದೈನೆಸಿ ಸ್ಥಿತಿಗೆ ತಳ್ಳಿದೆ ಈ ಕರೊನಾ ವೈರಸ್.

ಹೌದು, ಟಿವಿ ವಾಹಿನಿಯೊಂದ ಕ್ಯಾಮೆರಮನ್ ಗೆ ಕರೋನ ಸೊಂಕು ಕಳೆದ ಎರಡು ದಿನಗಳ ಹಿಂದೆ ಪಾಸಿಟಿವ್ ಬಂದ ಕಾರಣ ಆತನ ಜತೆ ನೇರವಾಗಿ ಹಾಗೂ ಪರೋಕ್ಷವಾಗಿ ಸಂಪರ್ಕದಲ್ಲಿದ್ದ 35 ಕ್ಕೂ ಹೆಚ್ಚು ಮಂದಿಯನ್ನು ಸ್ವಯಂಗೃಹ ಬಂಧನಕ್ಕೆ ಒಳಪಡಿಸಲಾಗಿದೆ.

: bangalore-journalist-quarentine-mother-dead

ಈ ರೀತಿ ಸ್ವಯಂಗೃಹ ಬಂಧನಕ್ಕೆ ಒಳಗಾದ ದಿನವೇ (ಶನಿವಾರ) ಖಾಸಗಿ ವಾಹಿನಿಯೊಂದರ ವರದಿಗಾರನ ತಾಯಿ ಮೃತರಾದರು. ಬಾಗಲಕೋಟೆ ಮೂಲದ ಈ ಪತ್ರಕರ್ತ ಕಡೆಗಾಲದಲ್ಲಿ ತನ್ನ ತಾಯಿಯ ಮುಖದರ್ಶನ ಮಾಡಲಾಗದಂತ ಪರಿಸ್ಥಿತಿ. ಕ್ವಾರಂಟೈನ್ ನಲ್ಲಿದ್ದ ಕಾರಣ ಬೆಂಗಳೂರಿನಿಂದ ಬಾಗಲಕೋಟೆಗೆ ತೆರಳು ಅಧಿಕಾರಿಗಳು ಅನುಮತಿ ನೀಡಲಿಲ್ಲ. ಜತೆಗೆ ಊರಿನಲ್ಲೂ ಸಂಜೆಯೊಳಗೆ ಅಂತ್ಯ ಸಂಸ್ಕಾರ ಮಾಡಿ ಮುಗಿಸ ಬೇಕಾಗಿತ್ತು. ಈ ಎಲ್ಲದರ ಕಾರಣದಿಂದ ಪತ್ರಕರ್ತನಿಗೆ ಊರಿಗೆ ತೆರಳಿ ತಾಯಿ ಮುಖ ದರ್ಶನ ಮಾಡುವ ಅವಕಾಶ ಲಭಿಸಲಿಲ್ಲ.

ಕರೋನ ಸೊಂಕಿನ ವ್ಯಕ್ತಿಯ ಸಂಪರ್ಕದ ಕಾರಣ, ಈ ಪತ್ರಕರ್ತನನ್ನು ಶನಿವಾರವೇ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಆದ್ದರಿಂದ ಬೆಂಗಳೂರಿನಿಂದ ಸ್ವಂತ ಊರಿಗೆ ತೆರಳಿ ತಾಯಿ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವ ಅವಕಾಶ ಇವರಿಗೆ ಲಭಿಸಲೇ ಇಲ್ಲ.

ಇಂತಹದೊಂದು‌ ಪರಿಸ್ಥಿತಿ ಮುಂದೆ ಯಾವ ವ್ಯಕ್ತಿಗೂ ಬಾರದೆ ಇರಲಿ.

 

 

key words : bangalore-journalist-quarentine-mother-dead