ಪ್ರೇಮ ವೈಪಲ್ಯ ಹಿನ್ನೆಲೆ: ದಂತ ವೈದ್ಯೆ ಆತ್ಮಹತ್ಯೆಗೆ ಶರಣು.

Promotion

ಬೆಂಗಳೂರು,ಫೆಬ್ರವರಿ,2,2023(www.justkannada.in): ಪ್ರೇಮ ವೈಪಲ್ಯ ಹಿನ್ನೆಲೆ, ದಂತ ವೈದ್ಯೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಸಂಜಯನಗರದಲ್ಲಿ ಜನವರಿ 25 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಪ್ರಿಯಾಂನ್ಷಿ ತ್ರಿಪಾಠಿ ಆತ್ಮಹತ್ಯೆಗೆ ಶರಣಾದ ದಂತ ವೈದ್ಯೆ.  ಉತ್ತರ ಪ್ರದೇಶ ಲಕ್ನೋ ಮೂಲದ ಪ್ರಿಯಾಂನ್ಷಿ  ರಾಮಯ್ಯ ಆಸ್ಪತ್ರೆಯಲ್ಲಿ ದಂತವೈದ್ಯೆಯಾಗಿದ್ದರು.

ಈ ಮಧ್ಯೆ ವೈದ್ಯ ಸುಮಿತ್ ಎಂಬುವವರನ್ನ ಪ್ರಿಯಾಂನ್ಷಿ ಪ್ರೀತಿಸುತ್ತಿದ್ದು ಪ್ರೇಮ ವೈಪಲ್ಯ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Bangalore-Dentist –commits- suicide.