“ಬೆಂಗಳೂರಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ, ಪಾಲಿಕೆ ಮಾರ್ಷಲ್‌ಗಳಿಗೆ ಹೆಚ್ಚಿನ ಅಧಿಕಾರ”

ಬೆಂಗಳೂರು,ಮಾರ್ಚ್,14,2021(www.justkannada.in) : ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಪಾಡದೇ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡುತ್ತಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾರ್ಷಲ್‌ಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಿದೆ.jk

ನಿಯಮ ಮೀರಿ ಜನ ಸೇರಿದ್ದರೆ ದಂಡ

ಶನಿವಾರದ ವರದಿಯಂತೆ ಬೆಂಗಳೂರು ನಗರದಲ್ಲಿ 630 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 410811 ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 5,853 ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನಿಯಮ ಮೀರಿ ಜನ ಸೇರಿದ್ದರೆ ದಂಡ ವಿಧಿಸುವ, ದಂಡ ವಿಧಿಸುವ ಮಾರ್ಷಲ್‌ಗಳ ಜೊತೆ ಅನುಚಿತವಾಗಿ ವರ್ತಿಸುವವರಿಗೂ ದಂಡ ಹಾಕಲು ಅನುಮತಿ ನೀಡಿದೆ.

ಸಾಮಾಜಿಕ ಅಂತರ ಮಾಯ, ಮಾಸ್ಕ್ ಧರಿಸದೇ ಓಡಾಟ

Bangalore-Covid-cases-Number-Increase-Policy-marshals-Much more-Authority 
ಕೃಪೆ: internet

ನಗರದಲ್ಲಿ ಕಳೆದ ಮೂರು ದಿನದಿಂದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಜನರು ಸಾಮಾಜಿಕ ಅಂತರ ಕಾಪಾಡುತ್ತಿಲ್ಲ, ಹಲವಾರು ಜನರು ಮಾಸ್ಕ್ ಧರಿಸದೇ ಓಡಾಟವನ್ನು ನಡೆಸುತ್ತಿದ್ದಾರೆ. ಮದುವೆ, ಸಮಾವೇಶಗಳಲ್ಲಿ ಹೆಚ್ಚಿನ ಜನರು ಸೇರುತ್ತಿದ್ದಾರೆ. 200ಕ್ಕಿಂತಲೂ ಅಧಿಕ ಜನರು ಸೇರುವಂತಿಲ್ಲ ಎಂಬ ನಿಯಮವಿದ್ದರೂ ಯಾರೂ ಸಹ ಪಾಲನೆ ಮಾಡುತ್ತಿಲ್ಲ. ಆದ್ದರಿಂದ, ಬಿಬಿಎಂಪಿ ಮಾರ್ಷಲ್‌ಗಳಿಗೆ ಹೆಚ್ಚಿನ ಅಧಿಕಾರ ನೀಡಿದೆ.

key words : Bangalore-Covid-cases-Number-Increase-Policy-marshals-Much more-Authority