ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮುಂದೆ ಹಲವು ಬೇಡಿಕೆಗಳನ್ನಿಟ್ಟ ಆಟೋ ಚಾಲಕರು.

ಬೆಂಗಳೂರು,ಜುಲೈ,31,2023(www.justkannada.in): ಆಟೋ ಚಾಲಕರ ಜೊತೆ ಸಾರಿಗೆ ಸಚಿವ  ರಾಮಲಿಂಗಾರೆಡ್ಡಿ ನಡೆಸಿದ  ಸಭೆ ಅಂತ್ಯವಾಗಿದ್ದು  ಸಚಿವರ ಮುಂದೆ ಆಟೋಚಾಲಕರು ಹಲವು ಬೇಡಿಕೆಗಳನ್ನಿಟ್ಟಿದ್ದಾರೆ.

ಈ ಕುರಿತು ಸಭೆ ಬಳಿಕ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ,  ಓಲಾ, ಉಬರ್​ನಿಂದ ಸಮಸ್ಯೆಯಾಗುತ್ತಿದೆ ಅಂತಾ ಆಟೋ ಚಾಲಕರು ತಿಳಿಸಿದ್ದಾರೆ. ಆದರೆ ರ್ಯಾಪಿಡೋ ವಿಚಾರವಾಗಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ ಎಂದು  ತಿಳಿಸಿದರು.

ಹಾಗೆಯೇ  ವಿಮೆ ಮಾಡಿಸಬೇಕು. ಚಾಲಕರ ದಿನಾಚರಣೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಕಾನೂನುಬಾಹಿರ ಆ್ಯಪ್‌ಗಳನ್ನು ಬ್ಯಾನ್ ಮಾಡುವಂತೆ ಕೋರಿದ್ದಾರೆ, ಏರ್​ಪೋರ್ಟ್​ ಬಳಿ ಇಂದಿರಾ ಕ್ಯಾಂಟೀನ್ ಓಪನ್​ಗೆ ಬೇಡಿಕೆ ಇದೆ. ಜಾಗ ಕೊಟ್ಟರೆ ಕೂಡಲೇ ಇಂದಿರಾ ಕ್ಯಾಂಟೀನ್​ ಓಪನ್ ಮಾಡುತ್ತೇವೆ. ಖಾಸಗಿ ಬಸ್​ಗಳ ಚಾಲಕರು ಕೂಡ ಸಮಸ್ಯೆ ಹೇಳಿಕೊಂಡಿದ್ದಾರೆ. ವಾಹನಗಳ ಮೇಲೆ ಬ್ಲಾಕ್ ಲಿಸ್ಟ್ ತೆಗೆಯಲು ಅದಾಲತ್ ಮಾಡುತ್ತೇವೆ ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

Key words: Auto drivers – many -demands – Transport Minister -Ramalingareddy.