ಜೆಸ್ಕಾಂನಿಂದ ಬಂದ ವಿದ್ಯುತ್ ಬಿಲ್ ನೋಡಿ  ಬೆಚ್ಚಿಬಿದ್ದ ಜನರು….

Promotion

ಬಳ್ಳಾರಿ,ಜ,24,2020(www.justkannada.in): ಒಂದು ಮನೆಗೆ ವಿದ್ಯುತ್ ಬಿಲ್ ನೂರು ಅಥವಾ ಸಾವಿರ ರೂಗಳಲ್ಲಿ ಬರುವುದು ಸಾಮಾನ್ಯ. ಆದರೆ ಜೆಸ್ಕಾಂನಿಂದ ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಂದಿದ್ದನ್ನ ನೋಡಿ ಮನೆ ಮಂದಿ ಬೆಚ್ಚಿಬಿದ್ದಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಹೌದು ಬಳ್ಳಾರಿ ಜಿಲ್ಲೆ ಶಿರಗುಪ್ಪ ಪಟ್ಟಣದ ನಿವಾಸಿಗಳಿಗೆ ಜೆಸ್ಕಾಂನಿಂದ ಲಕ್ಷ ಲಕ್ಷ ವಿದ್ಯುತ್ ಬಿಲ್ ನೀಡಿದ್ದು, ಗ್ರಾಹಕರು ವಿದ್ಯುತ್ ಬಿಲ್ ನೋಡಿ ದಂಗಾಗಿದ್ದಾರೆ. ಒಂದೊಂದು ಮನೆಗೆ ಲಕ್ಷಾಂತರ ಬಿಲ್‌ ನೀಡಿರುವುದನ್ನು ನೋಡಿ ಗ್ರಾಹಕರು ಜೆಸ್ಕಾಂ ಸಿಬ್ಬಂದಿಗೆ ಹಿಡಿ ಶಾಪ ಹಾಕಿದ್ದಾರೆ.

ಒಂದು ಮನೆಗೆ 5 ಲಕ್ಷ ವಿದ್ಯುತ್ ಬಿಲ್ ನೀಡಿದರೇ 100ಕ್ಕೂ ಹೆಚ್ಚು ಮನೆಗೆ 1 ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಿಲ್ ನೀಡಿ ಜೆಸ್ಕಾಂ ಎಡವಟ್ಟು ಮಾಡಿದೆ.  ಇನ್ನು ಹೀಗೆ ಬಿಲ್‌ ಕೊಟ್ಟ ತಕ್ಷಣ ಎಚ್ಚೆತ್ತುಕೊಂಡ ಜೆಸ್ಕಾಂ ಸಿಬ್ಬಂದಿ ಕೂಡಲೇ ಆಗಿರುವ ಲೋಪವನ್ನು ಸರಿಪಡಿಸುವುದಕ್ಕೆ ಮುಂದಾಗಿದ್ದು, ಹೊಸ ಬಿಲ್‌  ನೀಡಿದ್ದಾರೆ ಎನ್ನಲಾಗಿದೆ.

Key words: ballari- electricity bill -Jescom-shock