Saturday, August 15, 2026

BDA Apartments

Home Front Page ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಮೂರನೇ ಸುತ್ತಿಗೆ ಜಿಗಿದ ನಡಾಲ್

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಮೂರನೇ ಸುತ್ತಿಗೆ ಜಿಗಿದ ನಡಾಲ್

ಮೆಲ್ಬರ್ನ್‌, ಜನವರಿ 2, 2019 (www.justkannada.in): ವಿಶ್ವದ ಅಗ್ರ ಕ್ರಮಾಂಕದ ಆಟಗಾರ ರಫೇಲ್‌ ನಡಾಲ್‌, ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೋಸ್‌ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಮೂರನೇ ಸುತ್ತಿಗೆ ದಾಪುಗಾಲಿಟ್ಟರು.

ಆತಿಥೇಯ ದೇಶದ ಕಿರ್ಗಿಯೋಸ್‌ ನಾಲ್ಕು ಸೆಟ್‌ಗಳ ಹೋರಾಟದಲ್ಲಿ ಫ್ರಾನ್ಸ್‌ನ ಜಿಲ್ಲಿಸ್‌ ಸಿಮೊನ್‌ ಅವರನ್ನು ಮಣಿಸಿದರೆ, ವಿಂಬಲ್ಡನ್‌ ಚಾಂಪಿಯನ್‌ ಸಿಮೊನಾ ಹಲೆಪ್‌ ಮಹಿಳಾ ಸಿಂಗಲ್ಸ್‌ನಲ್ಲಿ ಅಧಿಕಾರಯುತ ಆಟ ಪ್ರದರ್ಶಿಸಿ ಬ್ರಿಟನ್‌ನ ಹ್ಯಾರಿಯೆಟ್‌ ಡಾರ್ಟ್‌ ಅವರನ್ನು ಸದೆಬಡಿದರು.‌

ನಡಾಲ್‌ 6-3, 7-6 (7-4), 6-1 ರಿಂದ ‌ಅರ್ಜೆಂಟೀನಾದ ಫೆಡರಿಕೊ ಡೆಲ್ಬೊನಿಸ್‌ ಅವರನ್ನು ಮಣಿಸಿದರು. ಆಟದ ಮಧ್ಯೆ ರ‍್ಯಾಲಿಯೊಂದರ ಸಂದರ್ಭದಲ್ಲಿ ಚೆಂಡಿನ ಏಟು ತಿಂದ ಬಾಲ್‌ಗರ್ಲ್‌ಗೆ ಸಾಂತ್ವನಗೊಳಿಸಿದ್ದು, ಪ್ರೇಕ್ಷಕರ ಗಮನ ಸೆಳೆಯಿತು.