ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್’ನಲ್ಲಿ ಜಡೇಜಾಗೆ ಕೋಕ್, ಅಶ್ವಿನ್’ಗೆ ಲಕ್ !

ಬೆಂಗಳೂರು, ಆಗಸ್ಟ್ 24, 2021 (www.justkannada.in): ಇಂಗ್ಲೆಂಡ್ ‌ವಿರುದ್ಧದ 3ನೇ ಟೆಸ್ಟ್’ನಲ್ಲಿ ರವೀಂದ್ರ ಜಡೇಜಾಗೆ ಕೋಕ್ ನೀಡಿ ಅಶ್ವಿನ್ ಗೆ ಚಾನ್ಸ್ ನೀಡುವ ಸಾಧ್ಯತೆ ಇದೆ.

ಮೊದಲೆರಡು ಟೆಸ್ಟ್’ಗಳಲ್ಲಿ ಬೌಲಿಂಗ್ ‌ ನಲ್ಲಿ ನಿರಾಸೆ ಮೂಡಿಸಿರುವ ಜಡೇಜಾ ಬದಲಿಗೆ ಆಲ್’ ರೌಂಡರ್ ‌ ರವಿಚಂದ್ರನ್ ಆಶ್ವಿನ್ ‌ಕಣಕ್ಕಿಳಿಯುವ ಸಾಧ್ಯತೆ ಇದೆ.

ಮೊದಲ ಎರಡು ಟೆಸ್ಟ್ ಗಳಿಗೆ ರವಿಚಂದ್ರನ್ ‌ ಅಶ್ವಿನ್ ಕೈಬಿಟ್ಟ ನಿರ್ಧಾರಕ್ಕೆ ವಿರಾಟ್ ಕೊಹ್ಲಿ ವಿರುದ್ಧ ಕೆಲವರು ಅಸಮಾಧಾನ ಹೊರಹಾಕಿದ್ದರು.

ಮೊದಲೆರಡು ಟೆಸ್ಟ್ ಗಳಲ್ಲಿ ವಿಕೆಟ್ ಪಡೆಯಲು ವಿಫಲರಾದ ಜಡೇಜಾ ಬದಲಿಗೆ ಮೂರನೇ ಟೆಸ್ಟ್ ‌ ಪಂದ್ಯದಲ್ಲಿ ಅಶ್ವಿನ್ ‌ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.