ಮೈಸೂರು ದಸರಾ ಮಹೋತ್ಸವ: ಜಂಬೂಸವಾರಿಗೆ 14 ಆನೆಗಳ ಆಯ್ಕೆ ಮಾಡಿದ ಅರಣ್ಯಾಧಿಕಾರಿಗಳು.

ಮೈಸೂರು,ಆಗಸ್ಟ್,24,2021(www.justkannada.in):  ರಾಜ್ಯದಲ್ಲಿ ಕೊರೋನಾ 3ನೇ ಅಲೆ ಭೀತಿ ಹಿನ್ನೆಲೆ ಈ ಬಾರಿಯೂ ವಿಶ್ವ ವಿಖ್ಯಾತ ದಸರಾ ಮಹೋತ್ಸವವನ್ನ  ಸರಳವಾಗಿ ಆಚರಿಸಲಾಗುತ್ತದೆಯೇ ಅಥವಾ ಹಿಂದಿನಂತೆಯೇ ಸಂಭ್ರಮದಿಂದ ಆಚರಿಸಲಾಗುತ್ತದೆಯೇ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಆದರೆ ಇದಕ್ಕೂ ಮುನ್ನವೇ ದಸರಾ ಜಂಬೂ ಸವಾರಿಗೆ ಆನೆಗಳನ್ನ ಆಯ್ಕೆ ಮಾಡಲಾಗಿದೆ.

ದಸರಾ ಆಚರಣೆ ಸಂಬಂಧ ಹೈ ಪವರ್ ಕಮಿಟಿ ಮೀಟಿಂಗ್ ಮುನ್ನ ಡಿಸಿಎಫ್ ಕರಿಕಾಳ‌ನ್ ನೇತೃತ್ವದಲ್ಲಿ ಅರಣ್ಯಧಿಕಾರಿಗಳು 14 ಆನೆಗಳನ್ನ ಆಯ್ಕೆ ಮಾಡಿದ್ದಾರೆ. ವಿವಿಧ ಕ್ಯಾಂಪ್ ಗಳಿಂದ 14 ಆನೆಗಳನ್ನ ಪಟ್ಟಿ ಮಾಡಿ ಬೆಂಗಳೂರಿನ‌ ಮುಖ್ಯ ಅರಣ್ಯ ಕಚೇರಿಗೆ ಕಳುಹಿಸಲಾಗಿದೆ.

ಆನೆಕಾಡು, ದುಬಾರೆ, ಮತ್ತಿಗೋಡು,ಬಂಡೀಪುರ ಆನೆ ಶಿಬಿರದಿಂದ ಆನೆಗಳ ಆಯ್ಕೆ ಮಾಡಲಾಗಿದ್ದು,  ಸದ್ಯ ವಿಕ್ರಮ್, ವಿಜಯಾ, ಅಭಿಮನ್ಯು, ಗೋಪಾಲಸ್ವಾಮಿ, ಭೀಮಾ, ಮಹೇಂದ್ರ, ಧನಂಜಯ, ಪ್ರಶಾಂತ್, ಗೋಪಿ, ಹರ್ಷ, ಕಾವೇರಿ, ಲಕ್ಷ್ಮಣ, ಚೈತ್ರಾ,ಮಹಾರಾಷ್ಟ್ರ ಭೀಮಾ.ಆನೆಗಳು ಪಟ್ಟಿಯಲ್ಲಿ ಇವೆ.

ಸರಳ ದಸರಾವಾದರೆ 14 ಆನೆಗಳಲ್ಲಿ 7 ಆನೆಗಳು ನಾಡಿಗೆ ಕರೆಸಿಕೊಳ್ಳಲು ಅರಣ್ಯಾಧಿಕಾರಿಗಳು ಚಿಂತನೆ‌ ನಡೆಸಿದ್ದಾರೆ. ಕಳೆದ ವರ್ಷ  ಸರಳ ದಸರಾ ಆಚರಣೆ ಹಿನ್ನೆಲೆ 5 ಆನೆಗಳನ್ನ ಕರೆಸಿಕೊಳ್ಳಲಾಗಿತ್ತು. ಈ ಬಾರಿ ಆನೆಗಳ ಆರೋಗ್ಯದ ಹಾಗೂ ಮುಂಜಾಗ್ರತಾ ದೃಷ್ಟಿಯಿಂದ ಎರಡು ಆನೆಗಳನ್ನ ಹೆಚ್ಚುವರಿಯಾಗಿ ಕರೆಸಿಕೊಳ್ಳಲು ನಿರ್ಧಾರ ಮಾಡಲಾಗಿದೆ.

ENGLISH SUMMARY…

Mysuru Dasara Mahotsav: Forest officials pick 14 elephants for Jambu Savari
Mysuru, August 24, 2021 (www.justkannada.in): A decision on whether there will be a grand celebration of the historic Mysuru Dasara Mahotsav is yet to be taken by the State Government. However, the forest department officials have selected elephants that are eligible to participate in the world-famous Jambu Savari.
A team of forest officials led by DCF Karikalan has selected 14 elephants before the High-Power Committee meeting to be held with respect to the Mysuru Dasara preparations. All these 14 elephants are selected from different camps and the list has been forwarded to the Forest Department Head Office in Bengaluru.
Elephants are selected from Aanekaadu, Dubare, Mattigodu, and Bandipura. The list of selected elephants includes Vikram, Vijaya, Abhimanyu, Gopalaswamy, Bheema, Mahendra, Dhananjaya, Prashanth, Gopi, Harsha, Kaveri, Lakshmana, Chaitra, and Maharashtra Bheema.
In case if the State Government decides for simple celebrations the officials are contemplating bringing seven elephants out of these 14 elephants. Last year only 5 elephants were brought due to simple celebrations. This year keeping in mind the health of the elephants and as a precautionary measure, two extra elephants will be brought according to the officials concerned.
Keywords: Mysuru Dasara/ celebrations/ Jambu Savari/ 14 elephants selected

Key words: Mysore- Dasara Mahotsav -14  Elephants -selected – Jambusavari.