ಆ್ಯಶಸ್​ ಸೀರಿಸ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ

Promotion

ಲಂಡನ್, ಸೆಪ್ಟೆಂಬರ್ 09, 2019 (www.justkannada.in): ಆಶಸ್​ ಸರಣಿಯಲ್ಲಿ ಆಸ್ಟ್ರೇಲಿಯಾಗೆ 2ನೇ ಗೆಲುವು ಸಾಧಿಸಿದ್ದು, ಇಂಗ್ಲೆಂಡ್​ 185 ರನ್​ಗಳ ಸೋಲು ಕಂಡಿದೆ.

ಓಲ್ಡ್​ ಟ್ರಾಫೋರ್ಡ್​ನಲ್ಲಿ ನಡೆದ ಆಸ್ಟ್ರೇಲಿಯಾ-ಇಂಗ್ಲೆಂಡ್​ ನಡುವಿನ ನಾಲ್ಕನೇ ಟೆಸ್ಟ್​ನಲ್ಲಿ ಕಾಂಗರೂ ಪಡೆ ಭರ್ಜರಿ ವಿಜಯ ಸಾಧಿಸಿದೆ. ಈ ಮೂಲಕ ಐದು ಟೆಸ್ಟ್​ಗಳ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ 2-1ರ ಮುನ್ನಡೆ ಸಾಧಿಸಿದೆ.

383 ರನ್‌ಗಳ ಟಾರ್ಗೆಟ್​ ಪಡೆದಿದ್ದ ಇಂಗ್ಲೆಂಡ್‌ಗೆ ಪ್ಯಾಟ್​ ಕುಮ್ಮಿನ್ಸ್​ ಕಂಟಕವಾದರು. ಪರಿಣಾಮ 197 ರನ್​ಗಳಿಗೆ ಇಂಗ್ಲೆಂಡ್ ಆಲೌಟ್ ಆಯಿತು.

ನಾಲ್ಕನೇ ಟೆಸ್ಟ್​ನಲ್ಲಿ ಸ್ಟೀವ್​ ಸ್ಮಿತ್ ಆಡಿದ ಎರಡು ಇನ್ಸಿಂಗ್ಸ್​ಗಳು ಅದ್ಭುತವಾಗಿದ್ದವು. ಮೊದಲ ಇನ್ನಿಂಗ್ಸ್​ನಲ್ಲಿ ಡಬ್ಬಲ್​ ಸೆಂಚುರಿ, ಎರಡನೇ ಇನ್ನಿಂಗ್ಸ್​ನಲ್ಲಿ 82 ರನ್​ ಗಳಿಸಿದ ಸ್ಮಿತ್​, ಮ್ಯಾನ್​ ಆಫ್​ ದಿ ಮ್ಯಾಚ್​ ಪ್ರಶಸ್ತಿಯನ್ನು ಬಾಚಿಕೊಂಡರು.