Wednesday, August 12, 2026

BDA Apartments

Home Front Page ಯುಎಸ್ ಒಪೆನ್: ಟ್ರೋಫಿಗೆ ಮುತ್ತಿಟ್ಟ ರಾಫೆಲ್

ಯುಎಸ್ ಒಪೆನ್: ಟ್ರೋಫಿಗೆ ಮುತ್ತಿಟ್ಟ ರಾಫೆಲ್

ನ್ಯೂಯಾರ್ಕ್, ಸೆಪ್ಟೆಂಬರ್ 09, 2019 (www.justkannada.in): ರಫೆಲ್ ನಡಾಲ್ ಯುಎಸ್ ಓಪನ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ 19ನೇ ಗ್ರ್ಯಾಂಡ್‌ಸ್ಲಾಂ ಗೆದ್ದ ಗೌರವಕ್ಕೆ ಪಾತ್ರರಾದರು.

ಸುದೀರ್ಘ ಹೋರಾಟದಲ್ಲಿ 7-5, 6-3, 5-7, 4-6, 6-4 ಸೆಟ್ ಗಳಿಂದ ಮೆಡ್ವೆಡೇವ್ ಅವರನ್ನು ಮಣಿಸಿದ ಅನುಭವಿ ಆಟಗಾರ ನಾಲ್ಕನೇ ಬಾರಿಗೆ ಯುಎಸ್ ಟ್ರೋಫಿಗೆ ಮುತ್ತಿಕ್ಕಿದರು.

ಆರಂಭದ ಎರಡೂ ಸೆಟ್ ಗೆದ್ದ ಎರಡನೇ ಶ್ರೇಯಾಂಕದ ನಡಾಲ್‌ಗೆ ಬಳಿಕ ಆತಂಕದ ಕ್ಷಣಗಳು ಎದುರಾದವು. ಮೂರನೇ ಸೆಟ್‌ನಲ್ಲೂ ಒಂದು ಬ್ರೇಕ್‌ಪಾಯಿಂಟ್ ದೊರಕಿದರೂ, ಆಟದ ಶೈಲಿ ಬದಲಾಯಿಸಿಕೊಂಡ ಮೆಡ್ವೆಡೇವ್, ಮುಂದಿನ ಎರಡು ಸೆಟ್ ಗೆದ್ದರು. ಆದರೂ ಮೊದಲ ಎರಡು ಸೆಟ್‌ಗಳನ್ನು ಕಳೆದುಕೊಂಡು ಯುಎಸ್ ಓಪನ್ ಗೆಲ್ಲುವ ಅಪೂರ್ವ ಅವಕಾಶದಿಂದ ಮೆಡ್ವೆಡೇವ್ ವಂಚಿತರಾದರು.

ಮೆಡ್ವೆಡೇವ್ ಪ್ರಶಸ್ತಿ ಗೆದ್ದಿದ್ದರೆ, 1949ರ ಬಳಿಕ ಯುಎಸ್ ಓಪನ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಳ್ಳುತ್ತಿದ್ದರು.