ಬೇಷರತ್‌ ಕ್ಷಮೆಯಾಚಿಸಿದ ದಿನೇಶ್‌ ಕಾರ್ತಿಕ್‌

ನವದೆಹಲಿ, ಸೆಪ್ಟೆಂಬರ್ 09, 2019 (www.justkannada.in): ವಿವಾದಕ್ಕೊಳಗಾಗಿದ್ದ ಟೀಮ್ ಇಂಡಿಯಾ ಆಟಗಾರ ದಿನೇಶ್‌ ಕಾರ್ತಿಕ್‌ ಬೇಷರತ್‌ ಕ್ಷಮೆಯಾಚಿಸಿದ್ದಾರೆ.

ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಕೂಟದ ವೇಳೆ ಟ್ರಿನ್‌ಬಾಗೊ ನೈಟ್‌ರೈಡರ್ ತಂಡದ ಡ್ರೆಸ್ಸಿಂಗ್‌ ರೂಮಿನಲ್ಲಿ ಕಾಣಿಸಿಕೊಂಡಿದ್ದರು.

ಬಿಸಿಸಿಐ ಬಳಿ ಅನುಮತಿ ಪಡೆಯದೆ ನಟ ಶಾರುಖ್‌ ಖಾನ್‌ ಒಡೆತನದ ತಂಡದ ಕಾರ್ಯಕ್ರಮದಲ್ಲಿ ದಿನೇಶ್‌ ಕಾರ್ತಿಕ್‌ ಕಾಣಿಸಿಕೊಂಡಿದ್ದರು.

ಜತೆಗೆ ಟ್ರಿನ್‌ಬಾಗೊ ತಂಡದ ಜೆರ್ಸಿ ಕೂಡ ತೊಟ್ಟಿದ್ದರು. ಇದರಿಂದ ಬಿಸಿಸಿಐ ಕಾರ್ತಿಕ್‌ಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು.