“ಏ.10 ರಿಂದ 20ರವೆರೆಗೆ ಮೈಸೂರಿನ ಪ್ರವಾಸಿ ತಾಣಗಳ ಭೇಟಿಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ” : ಡಿಸಿ ರೋಹಿಣಿ ಸಿಂಧೂರಿ

ಮೈಸೂರು,ಏಪ್ರಿಲ್,10,2021(www.justkannada.in) : ಕೊರೊನಾ ಹೆಚ್ಚಳ ಹಿನ್ನೆಲೆ, ಏ.10 ರಿಂದ 20ರವೆರೆಗೆ ಮೈಸೂರಿನ ಪ್ರವಾಸಿ ತಾಣಗಳು,‌ ಟೆಂಪಲ್, ರೆಸಾರ್ಟ್, ಹೊಟೇಲ್, ಚಿತ್ರಮಂದಿರಗಳಿಗೆ ಕೋವಿಡ್ ಟೆಸ್ಟ್ ರಿಪೋರ್ಟ್ ಕಡ್ಡಾಯ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.Illegally,Sand,carrying,Truck,Seized,arrest,driverಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಏಪ್ರಿಲ್ 10 ರಿಂದ ಸಾಲು, ಸಾಲು ರಜೆಗಳಿದ್ದು, ಯಾವುದೇ ರೀತಿಯಾಗಿ ಪ್ರವಾಸಿ ತಾಣಗಳಿಗೆ ನಿರ್ಬಂಧವಿಲ್ಲ. ಆದರೆ, ಈ ಎಲ್ಲಾ ಕಡೆ ಭೇಟಿ ನೀಡುವವರಿಗೆ ಕೋವಿಡ್ ಟೆಸ್ಟ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ ಎಂದರು.

ನಗರ ಪ್ರದೇಶದಲ್ಲಿ ಕೋವಿಡ್ ಹೆಚ್ಚಾಗುತ್ತಿದೆ. ಮದುವೆ, ಶುಭ ಕಾರ್ಯಗಳಿಗೆ ಅನುಮತಿ ಕಡ್ಡಾಯ. ಬೆಂಗಳೂರಿನಿಂದ ಬರುವವರಿಗೆ ಆರ್‌ಟಿ‌ಪಿಸಿ‌ಆರ್ ಟೆಸ್ಟ್ ತಂದರೆ ಒಳ್ಳೆಯದು. ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ಜವಾಬ್ದಾರಿಯಿಂದ ವರ್ತಿಸುವುದು ಬಹಳ ಮುಖ್ಯ.  ಸಭೆ, ಸಮಾರಂಭ ನಡೆಸುವುದಕ್ಕೆ ಪೊಲೀಸ್ ಆಯುಕ್ತರ ಒಪ್ಪಿಗೆ ಪಡೆಯಬೇಕು ಎಂದಿದ್ದಾರೆ.

10 ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದ್ದು, ಪ್ರವಾಸಿ ತಾಣಗಳಲ್ಲಿ ಕೊರೊನಾ ವರದಿ ಪರೀಕ್ಷೆಗಾಗಿ 300 ಮಂದಿ ಹೋಮ್ ಗಾರ್ಡ್ ನೇಮಕ ಮಾಡಲಾಗುವುದು. ನಂಜನಗೂಡು ಸಾಮೂಹಿಕ ಮದುವೆಗಳಿಗೆ ಅವಕಾಶವಿಲ್ಲ. ಸಾವಿರಾರು ಜನರು ಸೇರುವ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. 50 ಜನ ಮೀರಿ ಸೇರುವಂತಿಲ್ಲ ಎಂದು ಮಾಹಿತಿ ನೀಡಿದರು.

ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾತನಾಡಿ, ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದು, ಗಡಿಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಆರ್‌ಟಿಪಿಸಿಆರ್ ವರದಿಯಲ್ಲಿ ನೆಗೆಟಿವ್ ಇದ್ದರೆ ಮಾತ್ರ ಒಳಗೆ ಪ್ರವೇಶ ನೀಡಲಾಗುತ್ತಿದೆ ಎಂದರು.

ಮೈಸೂರಿನಲ್ಲಿ ಕಳೆದ ವರ್ಷ ಜನರೇ ಬಹಳ ಜಾಗೃತರಾಗಿದ್ದರು. ಆಗ ಸಾರ್ವಜನಿಕರು ಕೊರೊನಾ ನಿಯಮ ಪಾಲಿಸುತ್ತಿದ್ದರು. ಈಗ ರಿಲ್ಯಾಕ್ಸ್ ಆಗೋದು ಬೇಡ. ಎಲ್ಲಾ ಇನ್ ಸ್ಪೆಕ್ಟರ್‌ಗಳಿಗೂ ಸೂಚನೆ ನೀಡಿರುವ ಹಿರಿಯ ಅಧಿಕಾರಿಗಳು. ಫೈನ್ ಅವಾಯ್ಡ್ ಮಾಡಬೇಕು ಅಂದರೆ ಮಾಸ್ಕ್ ಹಾಕಬೇಕು ಎಂದು ಹೇಳಿದರು.

ಅನುಮತಿ ಇಲ್ಲದೇ ಜಾತ್ರೆ, ಹಬ್ಬ ನಡೆಸಿದರೆ ಕಠಿಣ ಕ್ರಮApril 10-20 Mysore-tourist-destinations-visit-Corona-Negative-Reporting-Mandatory-DC-Rohini Sindhuri

ಹಳ್ಳಿಗಳು ಜಾತ್ರೆ, ಹಬ್ಬ, ಸಮಾರಂಭ ಕಾರ್ಯಕ್ರಮಗಳಿಗೆ ನಿರ್ಬಂಧ. ಅನುಮತಿ ಇಲ್ಲದೇ ಮಾಡಿದರೆ ಕಠಿಣ ಕ್ರಮ. 10, 15 ಸಾವಿರ ದಂಡವಿದೆ. ಇದನ್ನು ಉಲ್ಲಂಘನೆ ಮಾಡಬಾರದು ಎಂದು ತಿಳಿಸಿದರು.

ENGLISH SUMMARY….

Visitors to Mysuru should compulsorily produce Corona Negative report: DC Rohini Sindhuri
Mysuru, Apr.10, 2021 (www.justkannada.in): Visitors to the tourist places in and Mysuru including temples, resorts, hotels, cinema halls should compulsorily produce COVID test reports from April 10 to 20, according to Deputy Commissioner Rohini Sindhuri.April 10-20 Mysore-tourist-destinations-visit-Corona-Negative-Reporting-Mandatory-DC-Rohini Sindhuri
Addressing a press meet today she informed that the inflow of tourists and visitors might increase during the weekend as there are several holidays from April 10. Though there are no restrictions to visit tourist places, the visitors should compulsorily produce COVID test reports.
“Corona cases are increasing in the city and hence taking permission to conduct weddings and other auspicious functions has been made mandatory. It would be better to bring RTPCR reports for those who are coming from Bengaluru,” she informed.
She also requested the citizens to be extra careful as the cases of fatality is increasing and requested to stop behaving irresponsibly.
Keywords: DC Rohini Sindhuri/ Mysuru/ Corona/ COVID-19 Pandemic/ tourists should produce Corona negative certificate compulsorily

key words : April 10-20 Mysore-tourist-destinations-visit-Corona-Negative-Reporting-Mandatory-DC-Rohini Sindhuri