ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಪ್ರವೇಶಾತಿಗಾಗಿ ಅರ್ಜಿ ವಿತರಣೆ: ಸಾಮಾಜಿಕ ಅಂತರ ಕಾಯ್ದುಕೊಂಡು ಅರ್ಜಿ ಸ್ವೀಕರಿಸುತ್ತಿರುವ ವಿದ್ಯಾರ್ಥಿನಿಯರು..

ಮೈಸೂರು,ಜು,21,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕು ಹೆಚ್ಚಾಗಿದ್ದು ಈ ನಡುವೆ ನಗರದ ಮಹಾರಾಣಿ ಕಾಲೇಜಿನಲ್ಲಿ  ಪ್ರವೇಶಾತಿಗಾಗಿ ವಿದ್ಯಾರ್ಥಿನಿಯರು ಅರ್ಜಿ ಸ್ವೀಕರಿಸುತ್ತಿದ್ದಾರೆ.jk-logo-justkannada-logo

ಹುಣಸೂರು ರಸ್ತೆಯಲ್ಲಿರುವ ಮಹಾರಾಣಿ ಡಿಗ್ರಿ ಕಾಲೇಜಿನ 2020 – 21 ನೇ ಸಾಲಿನ ಪ್ರಥಮ ವರ್ಷದ ಬಿಕಾಂ, ಬಿಬಿಎ ಪ್ರವೇಶಾತಿಗೆ ಅರ್ಜಿ ವಿತರಣೆ ಮಾಡಲಾಗುತ್ತಿದೆ. ಹೀಗಾಗಿ  ಸರದಿ ಸಾಲಿನಲ್ಲಿ ನಿಂತು ವಿದ್ಯಾರ್ಥಿನಿಯರು ಅರ್ಜಿ ಸ್ವೀಕರಿಸುತ್ತಿದ್ದಾರೆ. ಕಳೆದ ಒಂದು ವಾರದಿಂದಲೂ ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿನೀಯರು ಪಡೆಯುತ್ತಿದ್ದಾರೆ.application-admission-mysore-maharani-college

ವಿದ್ಯಾರ್ಥಿನಿಯರಿಗೆ ಕಾಲೇಜು ಸಿಬ್ಬಂದಿ ಸ್ಯಾನಿಟೇಸರ್ ವ್ಯವಸ್ಥೆ ಮಾಡಿ ಅರ್ಜಿ ನೀಡುತ್ತಿದ್ದಾರೆ. ಈ ನಡುವೆ ಮೈಸೂರು ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಏರಿಕೆಯಾಗುತ್ತಿದ್ದು, ಕೊರೊನಾ ಭಯದಿಂದಲೇ ಕಾಲೇಜು ಸೇರಲು ವಿಧ್ಯಾರ್ಥಿನಿಯರು ಬರುತ್ತಿದ್ದಾರೆ.

Key words: Application  admission –Mysore- Maharani College.