ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಮತ್ತೊಂದು ಬಲಿ.

Promotion

ಬೆಂಗಳೂರು,ಮೇ,22,2023(www.justkannada.in): ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರಿ ಮಳೆ ಮತ್ತೊಂದು ಬಲಿ ಪಡೆದಿದೆ. ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಯುವಕನ ಶವ ಪತ್ತೆಯಾಗಿದೆ.

ಲೋಕೇಶ್(31) ಮೃತಪಟ್ಟ ಯುವಕ. ನಿನ್ನೆ ಸುರಿದ ಭಾರಿ ಮಳೆಯಿಂದ ಕೆ.ಪಿ ಅಗ್ರಹಾರದ ರಾಜಕಾಲವೆ  ಬಳಿ ಲೋಕೇಶ್  ಕೊಚ್ಚಿ ಹೋಗಿದ್ದರು. ಇದೀಗ ಬ್ಯಾಟರಾಯನಪುರದ ರಾಜಕಾಲುವೆ ಬಳಿ ಲೋಕೇಶ್ ಶವ ಪತ್ತೆಯಾಗಿದೆ.

ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.  ನಿನ್ನಸುರಿದ ಮಳೆಗೆ ಕೆಆರ್ ಸರ್ಕಲ್ ಬಳಿ ಅಂಡರ್ ಪಾಸ್ ಬಳಿ ಕಾರು ಮುಳುಗಿ ಯುವತಿ ಸಾವನ್ನಪ್ಪಿದ್ದರು.

Key words: Another -victim – heavy rains – Bangalore.