ಐಎಂಎ ವಂಚನೆ ರೀತಿ ಮತ್ತೊಂದು ಪ್ರಕರಣ ಬೆಳಕಿಗೆ:  ಎಐಎಂಎಂಎಸ್ ವೆಂಚರ್ಸ್ ನಿಂದ 1400 ಕೋಟಿ ರೂ ವಂಚನೆ…

ಬೆಂಗಳೂರು,ಜೂ,11,2019(www.justkannada.in): ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಮನ್ಸೂರ್ ಖಾನ್ ಮಾಲೀಕತ್ವದ ಐಎಂಎ ಜ್ಯುವೆಲ್ಲರಿ ಕಂಪನಿ ವಂಚನೆ ಪ್ರಕರಣ ಬೆನ್ನಲ್ಲೆ ಇದೀಗ ಅದೇ ರೀತಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ನಗರದ ಜಯನಗರ 3ನೇ ಬ್ಲಾಕ್ ನಲ್ಲಿರುವ ಎಐಎಂಎಂಎಸ್ ವೆಂಚರ್ಸ್ ಕಂಪನಿ ಹೂಡಿಕೆದಾರರಿಗೆ ಸುಮಾರು 1400 ಕೋಟಿ ರೂ ವಂಚನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕಂಪನಿಗೆ ಐವರು ಪಾಲುದಾರರಿದ್ದಾರೆ. ಆಯೂಬ್, ಇಲಿಯಾಸ್, ಮುದಾಸ್ಸಿರ್, ಮುಜಾಹಿದ್, ಶಾಹಿದ್  ಐವರು ಸೇರಿ 2017 ಅಕ್ಟೋಬರ್ ನಲ್ಲಿ ಈ ಕಂಪನಿ ಪ್ರಾರಙಂಭಿಸಿದ್ದರು ಎನ್ನಲಾಗಿದೆ.

ಈ ನಡುವೆ ಈ ಕಂಪನಿಯಲ್ಲಿ ಸುಮಾರು 1600ಕ್ಕೂ ಹೆಚ್ಚು ಜನರು ಹೂಡಿಕೆ ಮಾಡಿದ್ದರು. ತಿಂಗಳಿಗೆ 1 ಲಕ್ಷ ಹೂಡಿಕೆ ಮಾಡಿದರೇ 10 ಸಾವಿರ ಲಾಭ ನೀಡಲಾಗುತ್ತದೆ ಎಂದು ನಂಬಿಸಿದ್ದ ಈ ಕಂಪನಿ ಕೆಲವರಿಗೆ ಎರಡು ತಿಂಗಳು ಕೆಲವರಿಗೆ ಒಂದು ತಿಂಗಳ ಲಾಭವನ್ನ ಮಾತ್ರ ನೀಡಿದೆ.

ಈ ನಡುವೆ ಹೂಡಿಕೆ ಹಣವನ್ನೆಲ್ಲಾ ಪಡೆದು ಐವರು ಪಾಲುದಾರರು ಕಂಪನಿಯನ್ನ ಮುಚ್ಚಿ ರಾತ್ರೋರಾತ್ರಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇದೀಗ ಹೂಡಿಕೆದಾರರು  ಎಐಎಂಎಂಎಸ್ ವೆಂಚರ್ಸ್ ಕಂಪನಿ ಬಳಿ ಜಮಾಯಿಸಿದ್ದು ಪ್ರತಿಭಟನೆ ನಡೆಸುತ್ತಿದ್ದಾರೆ.

Key words: Another–case- Rs 1400 crore- frauds -AIIMS Ventures-bangalore