ಅಮೂಲ್ಯಗೆ ನಕ್ಸಲ್ ಜೊತೆ ಸಂಬಂಧ ಇತ್ತು ಅನ್ನೋದು ಸಾಬೀತು: ಇಂತಹ ಘಟನೆಯ ಹಿಂದಿರುವ ಸಂಘಟನೆ ಪತ್ತೆ ಹಚ್ಚಿ ಕ್ರಮ – ಸಿಎಂ ಬಿಎಸ್ ವೈ ಹೇಳಿಕೆ..

ಮೈಸೂರು,ಫೆ,21,2020(www.justkannada.in): ಪಾಕಿಸ್ತಾನ್ ಜಿಂದಾಬಾದ್ ಎಂದು ಯುವತಿ ಅಮೂಲ್ಯ ಘೋಷಣೆ ಕೂಗಿದ ಪ್ರಕರಣ ಸಂಬಂಧ ಅಮೂಲ್ಯಗೆ ನಕ್ಸಲ್ ಜೊತೆ ಸಂಬಂಧ ಇತ್ತು ಅನ್ನೋದು ಸಾಬೀತಾಗಿದೆ. ಇಂತಹ ಘಟನೆಯ ಹಿಂದಿರುವ ಸಂಘಟನೆಯನ್ನ ಪತ್ತೆ ಹಚ್ಚಿ  ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಿಎಸ್  ಯಡಿಯೂರಪ್ಪ ತಿಳಿಸಿದರು.

ಖಾಸಗಿ ಕಾರ್ಯನಿಮಿತ್ತ ಸಿಎಂ ಬಿ ಎಸ್ ಯಡಿಯೂರಪ್ಪ ಮೈಸೂರಿಗೆ ಆಗಮಿಸಿದ್ದು, ವಿಶೇಷ ಹೆಲಿಕಾಪ್ಟರ್ ಮೂಲಕ ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಬಿಎಸ್ ವೈಗೆ ಉಸ್ತುವಾರಿ ಸಚಿವ ವಿ.ಸೋಮಣ್ಣ, ಕೃಷಿ ಸಚಿವ ಬಿ.ಸಿ.ಪಾಟೀಲ್ ಸಾಥ್ ನೀಡಿದರು. ನೆಚ್ಚಿನ ನಾಯಕ ಸ್ವಾಗತಿಸಲು ಸ್ಥಳೀಯ ಬಿಜೆಪಿ ಮುಖಂಡರು ಮುಗಿಬಿದ್ದರು. ೀ ವೇಳೆ ನಾಡಿನ ಜನತೆಗೆ ಶಿವರಾತ್ರಿ ಹಬ್ಬದ ಶುಭಾಶಯ ತಿಳಿಸಿದರು.

ಪಾಕ್ ಪರ ಅಮೂಲ್ಯ  ಘೋಷಣೆ ಕೂಗಿದ  ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವೇಳೆ ಪ್ರತಿಕ್ರಿಯಿಸಿದ ಸಿಎಂ ಬಿಎಸ್ ಯಡಿಯೂರಪ್ಪ,  ಅಮೂಲ್ಯ ತಂದೆಯೇ ಅವಳ ಕೈ ಕಾಲು ಮುರಿಯಿರಿ ಅಂದಿದ್ದಾರೆ. ನಾನು ಅವಳ‌ ರಕ್ಷಣಗೆ ಹೋಗೋಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ. ಅವರ ಹಿಂದೆ ಇರುವ ಸಂಘಟನೆಗಳ ಮೇಲೆ ಕ್ರಮ ತೆಗೆದುಕೊಳ್ಳದೆ ಇದ್ರೆ ಇದು ಕೊನೆಯಾಗೋಲ್ಲ. ಅಮೂಲ್ಯರಂತವರನ್ನ ಬೆಳೆಸುವ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ಇದಕ್ಕೆ ಕೊನೆಯಾಗೋಲ್ಲ. ಶಾಂತಿ ಸುವ್ಯವಸ್ಥೆ ಹಾಳು ಮಾಡೋದು ಇದರ ಹಿಂದಿರುವ ಷಡ್ಯಂತ್ರ. ಆಕೆಗೆ ನಕ್ಸಲ್ ಜೊತೆ ಸಂಬಂಧ ಇತ್ತು ಅನ್ನೋದು ಸಾಭೀತಾಗಿದೆ. ಇದಕ್ಕೆ ಯಾರು ಪ್ರೇರಣೆ ಕೊಟ್ಟರು ಅನ್ನೋದು ತನಿಖೆಯಾಗಬೇಕು. ಆಗಲೇ ಇದಕ್ಕೆಲ್ಲ ಕೊನೆ ಸಿಗಲಿದೆ ಎಂದು ಹೇಳಿದರು.

Key words:amulya-pro pak-case-mysore- cm bs yeddyuarappa