ಕೃಷಿ ಭೂಮಿ ಖರೀದಿ ಕಾಯ್ದೆ ತಿದ್ದುಪಡಿ ಉತ್ತಮ ನಿರ್ಧಾರ: ದುಡ್ಡು ಮಾಡುವ ದಂಧೆಗೆ ಕಡಿವಾಣ – ಸಚಿವ ಎಸ್ ಟಿ ಸೋಮಶೇಖರ್…

ದಾವಣಗೆರೆ,ಜೂ,12,2020(www.justkannada.in):  ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿಸಬಹುದು ಎಂಬ ನೂತನ ಕಾಯ್ದೆ ತಿದ್ದುಪಡಿಯು ರಾಜ್ಯ ಸರ್ಕಾರದ ಅತ್ಯುತ್ತಮ ನಿರ್ಧಾರ. ಈ ಮೂಲಕ ದುಡ್ಡು ಮಾಡುವ ದಂಧೆಗೆ ಕಡಿವಾಣ ಹಾಕಲಾಗಿದೆ ಎಂದು  ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿಸೋಮಶೇಖರ್, ಹಳೆಯ 79 B ಸೆಕ್ಷನ್ ಕೇವಲ ಅಧಿಕಾರಿಗಳು ಅಕ್ರಮ ಎಸಗಲು ಕಾರಣವಾಗಿತ್ತು. ಆ ಮೂಲಕ ಹಣ ಮಾಡುವ ದಂಧೆಯಾಗಿತ್ತು. ಆ ನಿಟ್ಟಿನಲ್ಲಿ ಅದನ್ನು ತೆಗೆಯುವ ನಿರ್ಧಾರಕ್ಕೆ ಸರ್ಕಾರ ಬಂದಿರುವುದು ಎಂದು ಉತ್ತರಿಸಿದರು.

ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆಯಾಗಿದ್ದು, ಕೃಷಿ ಕ್ಷೇತ್ರಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಅನುಕೂಲಕರವಾಗಿ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ವಯೋವೃದ್ಧ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಕೆ….

ದಾವಣೆಗೆರೆಯ ಸಿಜೆ ಆಸ್ಪತ್ರೆ ಆವರಣದಲ್ಲಿ ವಯೋವೃದ್ಧ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ತುಮಕೂರು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ್, ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್, ಸಂಸದರಾದ ಜಿ.ಎಂ.ಸಿದ್ದೇಶ್ವರ ಭೂಮಿಪೂಜೆ ನೆರವೇರಿಸಿದರು. Amendment of Agricultural Land Purchase Act – good- decision-Minister -ST Somashekhar.

ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಕೋವಿಡ್-19 ಪ್ರಯೋಗಾಲಯವನ್ನು ತುಮಕೂರು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ್, ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್, ಸಂಸದರಾದ ಜಿ.ಎಂ.ಸಿದ್ದೇಶ್ವರ ಅವರು ಉದ್ಘಾಟಿಸಿದರು.

Key words: Amendment of Agricultural Land Purchase Act – good- decision-Minister -ST Somashekhar.