42 ಲಕ್ಷ ವೀಕ್ಷಣೆ ಪಡೆದು ದಾಖಲೆ ಬರೆದ ಸಲ್ಮಾನ್ ಖಾನ್ ‘ರಾಧೆ’

Promotion

ಬೆಂಗಳೂರು, ಮೇ 15, 2021 (www.justkannada.in): ಸಲ್ಮಾನ್ ಖಾನ್ ಅಭಿನಯದ ರಾಧೆ ಚಿತ್ರ ಒಂದೇ ದಿನ 42 ಲಕ್ಷ ವೀಕ್ಷಣೆ ಪಡೆದು ಹೊಸ ದಾಖಲೆ ಬರೆದಿದೆ.

ಹೌದು. ಈದ್ ದಿನದ ಪ್ರಯುಕ್ತ ಶುಕ್ರವಾರ ಬಿಡುಗಡೆಯಾದ ರಾಧೆ ಚಿತ್ರ ಮೊದಲ ದಿನವೇ 42 ಲಕ್ಷ ಜನ ವೀಕ್ಷಿಸಿದ್ದಾರೆ. ಅಂದಹಾಗೆ ಇದೇ ಮೊದಲ ಬಾರಿಗೆ ಒಟಿಟಿ ಫ್ಲಾಟ್ ಫಾರಂನಲ್ಲಿ ಬಿಡುಗಡೆಯಾಗಿತ್ತು.

ಸಲ್ಮಾನ್ ಖಾನ್ ಟ್ವೀಟ್ ಮಾಡಿ ಈ ಸಂಭ್ರಮ ಹಂಚಿಕೊಂಡಿದ್ದು, ಸಿನಿಮಾ ರಂಗ ನಿಮ್ಮ ಪ್ರೀತಿ, ವಿಶ್ವಾಸ ಇಲ್ಲದೇ ಉಳಿಯಲು ಸಾಧ್ಯವಿಲ್ಲ. ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಸಲ್ಮಾನ್ ಖಾನ್ ಚಿತ್ರ ಮೊದಲ ದಿನವೇ ದಾಖಲೆ ವೀಕ್ಷಣೆ ಪಡೆದಿದ್ದಕ್ಕೆ ಶಾರೂಖ್ ಖಾನ್ ಕೂಡ ಅಭಿನಂದಿಸಿದ್ದಾರೆ.