ತಮ್ಮ ವಿರುದ್ದ ಸಚಿವ ಸಾ.ರಾ ಮಹೇಶ್ ಮಾಡಿದ ಆರೋಪಕ್ಕೆ ಅತೃಪ್ತ ಶಾಸಕ ಹೆಚ್.ವಿಶ್ವನಾಥ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತೆ..?

Promotion

ಬೆಂಗಳೂರು,ಜು,19,2019(www.justkannada.in):  ಬಿಜೆಪಿ ಅವರ ಬಳಿ ಹಣ ಪಡೆದು ಹೋಗಿದ್ದಾರೆಂದು ಆರೋಪಿಸಿದ ಸಚಿವ ಸಾ.ರಾ ಮಹೇಶ್ ಗೆ ಜೆಡಿಎಸ್ ಅತೃಪ್ತ ಶಾಸಕ ಹೆಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.

ಇಂದು ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಹೆಚ್.ವಿಶ್ವನಾಥ್,  ಸದನದಲ್ಲಿ ನನ್ನ ಗೈರಿನಲ್ಲಿ ಸಚಿವ ಸಾ.ರಾ ಮಹೇಶ್ ಗುರುತರ ಆರೋಪ ಮಾಡಿದ್ದಾರೆ. ಚುನಾವಣೆ ವೇಳೆ ಸಾಲ ಮಾಡಿಕೊಂಡಿದ್ದು ನಿಜ. ಅದು ಹೆಚ್.ಡಿ ಕುಮಾರಸ್ವಾಮಿ ಅವರಿಗೂ ಗೊತ್ತಿದೆ. ಸಾ.ರಾ ಮಹೇಶ್ ಗೂ ಗೊತ್ತಿದೆ. ಚುನಾವಣೆಗೆ ಎಷ್ಟು ಬೇಕಾದರೂ ಸಾಲ ಮಾಡಿಕೊಳ್ಳಿ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದರು. ಆದರೆ ಅವರು ನನ್ನ ಸಾಲ ತೀರಿಸಿದ್ರಾ..?  ಸಾಲಕ್ಕಾಗಿ ನಾನು ನನ್ನ ಅಡಮಾನ ಇಟ್ಟುಕೊಳ್ಳಲ್ಲ  ಎಂದು ಸಚಿವ ಸಾರಾ ಮಹೇಶ್ ಗೆ ಟಾಂಗ್ ಕೊಟ್ಟರು

ಹಾಜರಿಲ್ಲದ ಸದಸ್ಯರ ಯಾವುದೇ ಆರೋಪ ಬಂದರೆ  ಸ್ಪೀಕರ್ ಅನುಮತಿ ನೀಡಲ್ಲ ಆದರೆ ಸ್ಪೀಕರ್ ನಡೆ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಹೇಳಿದ ಹೆಚ್.ವಿಶ್ವನಾಥ್, ಸಚಿವ ಸಾ.ರಾ ಮಹೇಶ್ ಗೆ ಯಾವುದೇ ಸಂಸ್ಕಾರ ಇಲ್ಲ.ಸಾರಾ ರಿಯಲ್ ಎಸ್ಟೇಟ್ ನಡೆಸುತ್ತಿದ್ದವನು. ಮುಂದೆ ನಾನ್ಯಾರು ಎಂಬುದನ್ನು ತೋರಿಸುತ್ತೇನೆ. ಅವರು ಮಾಡಿರುವ ಆಪಾದನೆಗಳೆಲ್ಲ ಸತ್ಯಕ್ಕೆ ದೂರವಾದುದು. ನಮ್ಮಂತಹ ಹಿರಿಯರ ವಿರುದ್ಧ ಇಷ್ಟು ಲಘುವಾಗಿ ಮಾತನಾಡಬಾರದು ಎಂದು ತಿಳಿಸಿದರು.

Key words: allegations -minister –sara Mahesh- rebel mla-H.Vishwanath