ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಆರೋಪ: ನೋಟೀಸ್ ಗೆ ಉತ್ತರ ನೀಡಿದ ಶಾಸಕ ಎಸ್.ಆರ್ ಶ್ರೀನಿವಾಸ್.

ಬೆಂಗಳೂರು,ಅಕ್ಟೋಬರ್,12,2022(www.justkannada.in) ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಆರೋಪ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿ ನೀಡಿದ್ಧ ನೋಟೀಸ್ ಗೆ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಉತ್ತರ ನೀಡಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತಹಾಕದೇ ಅಡ್ಡಮತದಾನ ಮಾಡಿದ್ದಾರೆ ಎಂದು ಜೆಡಿಎಸ್ ನಾಯಕರು ಶಾಸಕ ಎಸ್.ಆರ್ ಶ್ರೀನಿವಾಸ್ ವಿರುದ್ಧ ವಿಧಾನಸಭಾ ಕಾರ್ಯದರ್ಶಿಗೆ ದೂರು ನೀಡಿದ್ದರು.

ಈ ಸಂಬಂಧ  ಎಸ್.ಆರ್ ಶ್ರೀನಿವಾಸ್ ಗೆ ವಿಧಾನಸಭಾ ಕಾರ್ಯದರ್ಶಿ ನೋಟೀಸ್ ಜಾರಿ ಮಾಡಿದ್ದರು. ನೋಟೀಸ್ ಗೆ ಉತ್ತರ ನೀಡಿರುವ ಎಸ್.ಆರ್ ಶ್ರೀನಿವಾಸ್,  ಕಳೆದ  ಅಕ್ಟೋಬರ್ ನಲ್ಲಿ ಅಭ್ಯರ್ಥಿ ಘೋಷಿಸಿದ್ದಾರೆ.  ಗುಬ್ಬಿ ಕ್ಷೇತ್ರದಲ್ಲಿ ಪರ್ಯಾಯ ಅಭ್ಯರ್ಥಿ ಘೋಷಿಸಿದ್ದಾರೆ. ಆದರೂ ನಾನು ಪಕ್ಷದ ಸಭೆ ಸಮಾರಂಭಗಳಲ್ಲಿ ಭಾಗಿಯಾಗಿದ್ದೇನೆ.  ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಮ್ಮನ್ನೇ ನಾಯಕರಯ ಪಕ್ಷದಿಂದ ಉಚ್ಛಾಟನೆ ಮಾಡಿದ್ಧಾರೆ ನಾನು ಜೆಡಿಎಸ್ ಬೆಂಬಲಿತ ಕುಪೇಂದ್ರ ರೆಡ್ಡಿಗೆ ಮತ ಹಾಕಿದ್ದೇನೆ.

ಸ್ಪಷ್ಟತೆ ಇಲ್ಲದ ನೋಟೀಸ್ ಬದಲಾಗುತ್ತಿರುವ ಹೇಳಿಕೆಗಳು ಇದನ್ನ ಗಮನಿಸಿದರೇ ಜೆಡಿಎಸ್ ನಾಯಕರೇ ಮಾಡಿಸಿದ್ದಾರೆ.  ಯಾರಿಂದಲೂ ಅಡ್ಡ ಮತದಾನ ಮಾಡಿಸಿ ನನ್ನ ವಿರುದ್ಧ ದೂರು ನೀಡಿದ್ದಾರೆ ಎಂದು ಎಸ್.ಆರ್ ಶ್ರೀನಿವಾಸ್ ತಿಳಿಸಿದ್ದಾರೆ.

Key words: Allegation – cross- voting – Rajya Sabha –elections- MLA- SR Srinivas – notice.