ಎಷ್ಟೇ ಪ್ರತಿರೋಧ ಬಂದರೂ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸಲ್ಲ- ಸಚಿವ ಆರ್.ಅಶೋಕ್.

ಬೆಂಗಳೂರು,ಅಕ್ಟೋಬರ್,11,2022(www.justkannada.in): ಎಷ್ಟೇ ಪ್ರತಿರೋಧ ಬಂದರೂ  ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದೆ.  ಎಷ್ಟೇ ವಿರೋಧ ಬರಲಿ, ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯ ನಿಲ್ಲುವುದಿಲ್ಲ. ಪ್ರವಾಹ ಪೀಡಿತ ಪ್ರದೇಶದಲ್ಲಿ ಮೊದಲ ಆದ್ಯತೆ ನೀಡಿ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ. ಎಲ್ಲರೂ ಸಹಕಾರ ನೀಡಿದರೆ ನಿರಂತರ ತೆರವು ಕಾರ್ಯಾಚರಣೆ ನಡೆಯಲಿದೆ. ಮುಂದಿನ ಮಳೆಗಾಲಕ್ಕೆ ತೊಂದರೆಯಾಗಬಾರದು ಎಂದರು.kpcc-president-dk-shivakumar-function-minister-r-ashok

ಒಂದೊಮ್ಮೆ ತೆರವು ಕಾರ್ಯಾಚರಣೆ ನಿಲ್ಲಿಸಿದರೆ, ಮುಂದಿನ ಮಳೆಗಾಲದಲ್ಲಿ ಈ ವರ್ಷದ ರೀತಿಯೇ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಎಷ್ಟೇ ಪ್ರತಿರೋಧ ಎದುರಾದರೂ ತೆರವು ಕಾರ್ಯಾಚರಣೆಯನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಹೇಳಿದ್ದಾರೆ.

Key words: Rajkaluve -encroachment -clearance -operation – not stopped-Minister- R. Ashok