ಬಿಜೆಪಿ ಸೇರಿಕೊಂಡರೆ ಪಾಪಿಗಳೆಲ್ಲಾ ಪಾವನರಾಗುತ್ತಾರೆ- ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯ.

Promotion

ಬೆಂಗಳೂರು,ನವೆಂಬರ್,29,2022(www.justkannada.in): ರೌಡಿಶೀಟರ್ ಆಗಿದ್ದ ಸೈಲೆಂಟ್ ಸುನೀಲನ ಜೊತೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ  ಬಿಜೆಪಿ ಬಗ್ಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಒಂದು ರೀತಿ ವಾಷಿಂಗ್ ಮಿಷನ್  ಇದ್ದಂತೆ. ಕೇಸರಿ ಶಾಲು ಹಾಕಿದ್ರೆ ಪಾಪಗಳೆಲ್ಲಾ ಹೊರಟು ಹೋಗುತ್ತೆ. ಬಿಜೆಪಿ ಸೇರಿಕೊಂಡರೇ ಪಾಪಿಗಳೆಲ್ಲಾ ಪಾವನರಾಗುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಸೈಲೆಂಟ್ ಸುನೀಲ ಸಿಸಿಬಿ ಪೊಲೀಸರಿಗೆ ಯಾಕೆ ಸಿಗುತ್ತಿಲ್ಲ.  ಬಿಜೆಪಿ ಸಂಸದರ ಜೊತೆ ಇರೋರು ಸಿಸಿಬಿ ಪೊಲೀಸರ ಕೈಗೆ ಸಿಗುತ್ತಿಲ್ವಾ..? ಸುನೀಲ್ ಬಗ್ಗೆ ಸಂಸದ ತೇಜಸ್ವಿ ಸೂರ್ಯರನ್ನ ಕೇಳಿದ್ರೆ ಗೊತ್ತಾಗುತ್ತೆ. ಪುಡಿ ರೌಡಿಗಳನ್ನ ಇಟ್ಟುಕೊಂಡು ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದರು.

Key words: All -sinners -become -pure – join –BJP-MLA- Priyank Kharge