ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ: ಸಿದ್ಧರಾಮಯ್ಯ ಸಿಎಂ ಆಗಬೇಕೆಂಬುದು ಎಲ್ಲರ ಆಶಯ- ಹೆಚ್.ಎಂ ರೇವಣ್ಣ.

ಮಂಡ್ಯ,ನವೆಂಬರ್,29,2022(www.justkannada.in): 2023ರ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಸಿದ್ಧರಾಮಯ್ಯ ಸಿಎಂ ಆಗಬೇಕೆಂಬುದು ಎಲ್ಲರ ಆಶಯವಾಗಿದೆ ಎಂದು ಮಾಜಿ ಸಚಿವ ಎಚ್.ಎಂ ರೇವಣ್ಣ ನುಡಿದರು.

ಕೆ.ಆರ್ ಪೇಟೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಎಂ ರೇವಣ್ಣ, ಸಿದ್ದರಾಮುಲ್ಲಾ ಖಾನ್ ಗೇಳಿಕೆಗೆ ಎಂಬ ಶಾಸಕ ಸಿ.ಟಿ ರವಿ ಹೇಳಿಕೆಗೆ ಕಿಡಿಕಾರಿದರು. ಹೊಟ್ಟೆ ಕಿಚ್ಚಿನಿಂದ ಕೆಲವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.  ಕೆಲಸದ ಬಗ್ಗೆ ಮಾತನಾಡೋದು ಬಿಟ್ಟು ವೈಯಕ್ತಿಕ ಟೀಕೆ ಮಾಡ್ತಾರೆ.  ಬಿಜೆಪಿಯವರದ್ದು 40 ಪರ್ಸೆಂಟ್ ಸರ್ಕಾರ.  ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Key words: Next -Congress – power- HM Revanna.