ಸಿಎಂ ಬಿಎಸ್ ವೈ ನಡೆಸುತ್ತಿದ್ಧ ವೈಮಾನಿಕ ಸಮೀಕ್ಷೆ ಮೊಟಕು…

ಕಲಬುರ್ಗಿ,ಅಕ್ಟೋಬರ್,21,2020(www.justkannada.in): ಹವಮಾನ ವೈಪರಿತ್ಯ ಹಿನ್ನೆಲೆ  ನೆರೆ ಪೀಡಿತ ಪ್ರದೇಶಗಳಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನಡೆಸುತ್ತಿದ್ದ ವೈಮಾನಿಕ ಸಮೀಕ್ಷೆ ರದ್ಧಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.jk-logo-justkannada-logo

 ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಈ ಹಿನ್ನೆಲೆ ಇಂದಿನಿಂದ ಕಲಬುರುಗಿ, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲು ಸಿಎಂ ಬಿಎಸ್ ಯಡಿಯೂರಪ್ಪ ಮುಂದಾಗಿದ್ದರು. ಇಂದು ವಿಜಯಪುರ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಬೇಕಿತ್ತು. aerial-survy-cm-bs-yeddyurappa-cancel

ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದ  ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು, ಹವಾಮಾನ ವೈಪರಿತ್ಯ ಕಾರಣದಿಂದಾಗಿ ವೈಮಾನಿಕ ಸಮೀಕ್ಷೆಯನ್ನ ರದ್ದುಗೊಳಿಸಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ.  ಈ ನಡುವೆ ಅಲಮಟ್ಟಿಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅಧಿಕಾರಿಗಳ ಸಭೆ ನಡೆಸಬೇಕಿತ್ತು.ಆದರೆ ಸಭೆಯೂ ರದ್ಧಾಗಿದೆ.

Key words: Aerial survy – CM -BS yeddyurappa-cancel