ನಟಿ ಸೋನಾಕ್ಷಿ ಸಿನ್ಹಾ ಅರೆಸ್ಟ್ ? ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್

Promotion

ಮುಂಬೈ, ಆಗಸ್ಟ್ 07, 2019 (www.justkannada.in): ನಟಿ ಸೋನಾಕ್ಷಿ ಸಿನ್ಹಾ ಅರೆಸ್ಟ್​ ಆಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಸೋನಾಕ್ಷಿ ಕೈಗಳಿಗೆ ಕೋಳ ತೊಡಿಸುತ್ತಿರುವ ದೃಶ್ಯವು ಸೆರೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

‘ಮಿಷನ್​ ಮಂಗಲ್’​ ಚಿತ್ರೀಕರಣದಲ್ಲಿ ಈ ಘಟನೆ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಸೋನಾಕ್ಷಿ ನನ್ನನ್ನು ಬಂಧಿಸಲು ಸಾಧ್ಯವಿಲ್ಲ. ನಾನ್ಯರು ಗೊತ್ತಾ? ನಾನು ಮುಗ್ಧೆ, ನನಗೇನು ಗೊತ್ತಿಲ್ಲ. ನನ್ನನ್ನು ಹೇಗೆ ಬಂಧಿಸಲು ಸಾಧ್ಯ? ಎಂದು ಕೂಗುತ್ತಿರುವುದು ಕಂಡುಬರುತ್ತಿದೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಟ್ವಿಟರ್​ನಲ್ಲೂ #AsliSonaArrested ಹಾಗೂ #SonakshiSinhaArrested ಎಂಬ ಹ್ಯಾಶ್​ಟ್ಯಾಗ್​ ಟ್ರೆಂಡ್​ ಆಗಿತ್ತು.