ನಟಿ ರಾಗಿಣಿ ದ್ವಿವೇದಿ ವರ್ಕ್’ಔಟ್ ಸಿಕ್ರೇಟ್ ರಿವೀಲ್ !

Promotion

ಬೆಂಗಳೂರು, ನವೆಂಬರ್ 09, 2022 (www.justkannada.in): ನಟಿ ರಾಗಿಣಿ ದ್ವಿವೇದಿ ಇತ್ತೀಚೆಗೆ ಶೇರ್ ಮಾಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ರೆಡ್ ಕಲರ್ ಪ್ಯಾಂಟ್ ಹಾಗೂ ಲೆಮನ್ ಕಲರ್ ಟಾಪ್​ನಲ್ಲಿ ಕಾಣಿಸಿಕೊಂಡ ರಾಗಿಣಿ ಸಖತ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ.

ವಿಶೇಷ ಎಂದರೆ ಅವರ ಫಿಟ್ ನೆಸ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಂದಹಾಗೆ ರಾಗಿಣಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಯಕ್ಟಿವ್ ಆಗಿರುತ್ತಾರೆ. ತಮ್ಮ ವರ್ಕ್ ಔಟ್ ಫೋಟೊ, ವಿಡೀಯೋ ಸೇರ್ ಮಾಡಿ ತಮ್ಮ ಫ್ಯಾನ್ಸ್ ಗೂ ಮೋಟಿವೇಷನ್ ಮಾಡುತ್ತಾ ಇರುತ್ತಾರೆ.

ತಮ್ಮ ಮೇಜರ್ ಫಿಟ್ನೆಸ್ ಗೋಲ್ಸ್ ಫ್ಯಾನ್ಸ್ ಜೊತೆ ಶೇರ್ ಮಾಡುತ್ತಿರುವ ಸ್ಯಾಂಡಲ್​ವುಡ್ ನಟಿ ಫೋಟೋ ಹಾಗೂ ಫಿಟ್ ನೆಸ್ ಗೆ ಫ್ಯಾನ್ಸ್ ಜೈ ಎಂದಿದ್ದಾರೆ.

ಇನ್​​ಸ್ಟಾಗ್ರಾಮ್​ನಲ್ಲಿ 500ಕ್ಕೂ ಹೆಚ್ಚು ಪೋಸ್ಟ್​​​ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಟಿ ಈಗ ಫಿಟ್ನೆಸ್ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ.