ಹಲವು ವರ್ಷಗಳ ಬಳಿಕ ಭಾರತಕ್ಕೆ ಬಂದ ಪ್ರಿಯಾಂಕಾ ಚೋಪ್ರಾ

ಬೆಂಗಳೂರು, ನವೆಂಬರ್ 09, 2022 (www.justkannada.in): ಮಾಜಿ ವಿಶ್ವ ಸುಂದರಿ, ನಟಿ ಪ್ರಿಯಾಂಕಾ ಚೋಪ್ರಾ ಹಲವು ವರ್ಷಗಳ ಬಳಿಕ ಭಾರತಕ್ಕೆ ಮರಳಿದ್ದಾರೆ.

ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ತಾರತಮ್ಯವನ್ನು ಕೊನೆಗೊಳಿಸಲು ಯುನಿಸೆಫ್ ಕಾರ್ಯಗಳ ಪ್ರಗತಿಯನ್ನು ನೋಡಲು ಅವರು ಉತ್ತರ ಪ್ರದೇಶದ ಲಕ್ನೋಗೆ ಭೇಟಿ ನೀಡಿದ್ದಾರೆ.

ಅಂದಹಾಗೆ ಪ್ರಿಯಾಂಕಾ ಚೋಪ್ರಾ ಯುನಿಸೆಫ್‌ನ ಸದ್ಭಾವನಾ ರಾಯಭಾರಿಯಾಗಿದ್ದು ಅವರು ತಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ವಿಷಯವನ್ನು  ಪ್ರಿಯಾಂಕಾ ಚೋಪ್ರಾ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ. ತಮ್ಮ ಭೇಟಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು “ಸದ್ಯ, ನಾನು ಯುನಿಸೆಫ್‌ನೊಂದಿಗೆ ಭಾರತದ ಲಕ್ನೋದಲ್ಲಿದ್ದೇನೆ. ನಾನು ಈ ಕ್ಷೇತ್ರ ಭೇಟಿಗಾಗಿ ನಿಜವಾಗಿಯೂ ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.