ಸಿಎಂ ಬೊಮ್ಮಾಯಿಗೆ ನಟ ಸುದೀಪ್ ಬೆಂಬಲ ವಿಚಾರ: ಇದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ ಎಂದ ಡಿ.ಕೆ ಶಿವಕುಮಾರ್.

Promotion

ನವದೆಹಲಿ,ಏಪ್ರಿಲ್,5,2023(www.justkannada.in): ಸಿಎಂ ಬೊಮ್ಮಾಯಿ ಅವರಿಗೆ ನಟ ಕಿಚ್ಚ ಸುದೀಪ್‌ ಬೆಂಬಲ ವಿಚಾರ ಕುರಿತು ಪ್ರತಿಕ್ರಿಯಿಸಿರುವ  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌, ಇದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.

ನವದೆಹಲಿಯಲ್ಲಿ ಈ ಕುರಿತು ಮಾತನಾಡಿದ  ಡಿಕೆ ಶಿವಕುಮಾರ್‌ ಮಾತನಾಡಿ, ಸರ್ಕಾರ ಸಿನಿಮಾ ನಟರ ಮೇಲೆ ಒತ್ತಡ ಹಾಕಿರಬಹುದು ಅಥವಾ  ಸುದೀಪ್ ಬಳಿ ಮನವಿ ಮಾಡಿಕೊಂಡಿರಬಹುದು. ಈ ಹಿಂದೆ ನಾನು ಸುದೀಪ್ ಭೇಟಿಯಾಗಿದ್ದೆ. ಆಗ ರಾಜಕೀಯ ಉದ್ದೇಶದಿಂದ ನಾನು ಸುದೀಪ್ ಭೇಟಿಯಾಗಿರಲಿಲ್ಲ. ನಾನು ಸುದೀಪ್ ಹಳೇ ಸ್ನೇಹಿತರು. ನನ್ನ ಮತ್ತು ಸುದೀಪ್ ನಡುವೆ ರಾಜಕೀಯ ಚರ್ಚೆ ನಡೆದಿಲ್ಲ ಎಂದರು.

ಕೆಲವೇ ಕ್ಷಣಗಳಲ್ಲಿ ಸಿಇಸಿ ಸಭೆ ಮಾಡುತ್ತೇವೆ. ಸಭೆಯಲ್ಲಿ  40 ರಿಂದ 50 ಕ್ಷೇತ್ರಗಳ ಟಿಕೆಟ್ ಅಂತಿಮವಾಗುವ ಸಾಧ್ಯತೆ ಇದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: Actor- Sudeep -supports -CM Bommai-DK Shivakumar