ಕ್ರಿಕೆಟ್ ದೇವರ ಜತೆ ಕಾಣಿಸಿಕೊಂಡ ‘ಸಿಹಿಕಹಿ’ ಹಿತಾ !

Promotion

ಬೆಂಗಳೂರು, ಜನವರಿ 25, 2019 (www.justkannada.in): ಸಿಹಿ ಕಹಿ ಚಂದ್ರಶೇಖರ್ ಪುತ್ರಿ, ನಟಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಭೇಟಿ ಮಾಡಿದ್ದಾರೆ! ಇಷ್ಟೇ ಅಲ್ಲ ಜಾಹೀರಾತಿಗಾಗಿ ಅವರ ಜತೆ ಕೆಲಸವನ್ನೂ ಮಾಡಿದ್ದಾರೆ.

ಹೌದು. ಹಿತಾಗೆ ಸಚಿನ್ ತೆಂಡೂಲ್ಕರ್ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಜಾಹಿರಾತು ಒಂದರಲ್ಲಿ ಅವರ ಜೊತೆಗೆ ನಟಿಸಿದ್ದಾರೆ. ಫ್ಯಾನ್ ಕಂಪನಿವೊಂದರ ಜಾಹಿರಾತು ಇದಾಗಿದ್ದು, ನಿನ್ನೆ ಅದರ ಚಿತ್ರೀಕರಣ ನಡೆದಿದೆ.

ಒಂದು ವಾರದ ಮುಂಚೆ ಈ ಜಾಹಿರಾತು ಮಾಡುತ್ತೇನೆ ಎಂದು ನಿಗದಿಯಾಗಿತ್ತು. ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ. ಅಂತು ಸಚಿನ್ ರನ್ನು ನೋಡುವ ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ತುಂಬ ಖುಷಿ ಆಗುತ್ತದೆ. ಇದು ನನ್ನ ಜೀವನದ ಮೋಸ್ಟ್ ಮೆಮೋರೆಬಲ್ ಮೂಮೆಂಟ್ ಎಂದು ಹಿತಾ ಸಂತಸ ಹಂಚಿಕೊಂಡಿದ್ದಾರೆ.

ಕಳೆದ ವರ್ಷ ನಟ ಕಿರಣ್ ಜೊತೆಗೆ ಮದುವೆಯಾದ ಮೇಲೆ ಈಗ ಅವರು ಮುಂಬೈಗೆ ಶಿಫ್ಟ್ ಆಗಿದ್ದಾರೆ. ಅಲ್ಲಿ ಜಾಹಿರಾತುಗಳಲ್ಲಿ ನಟಿಸುತ್ತಿದ್ದಾರೆ.