ಪಕ್ಷಿಗಳ ಲೋಕಕ್ಕೂ ಲಗ್ಗೆ ಇಟ್ಟ ಡಿ.ಬಾಸ್: ನಟ ದರ್ಶನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಲವ್ ಯೂ ಹೇಳಿದ ಗಿಳಿಮರಿ..

Promotion

ಮೈಸೂರು,ಜೂ,17,2019(www.justkannada.in): ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಪ್ರಿಯ, ಅವರು ಪ್ರಾಣಿಗಳನ್ನ ಎಷ್ಟೊಂದು ಪ್ರೀತಿಸುತ್ತಾರೆಂಬುದು ಎಲ್ಲರಿಗೂ ಗೊತ್ತೇ ಇದೆ. ಈ ನಡುವೆ ಡಿ. ಬಸ್ ಇದೀಗ ಪಕ್ಷಿಗಳ ಲೋಕಕ್ಕೂ ಲಗ್ಗೆ ಇಟ್ಟಿದ್ದಾರೆ.

ಹೌದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೊಂದು ಗಿಳಿಮರಿ ಇದೀಗ ನಟ ದರ್ಶನ್ ಫ್ಯಾನ್ ಆಗಿದ್ದು, ಡಿ.ಬಾಸ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಲವ್ ಯೂ ಹೇಳಿದ ಗಿಳಿಮರಿ ವಿಡಿಯೋವೊಂದು ಸದ್ಯ ವೈರಲ್ ಆಗಿದೆ. ಮೈಸೂರಿನ ವಿಜಯನಗರದ ನವೀನ್ ಎಂಬುವವರು ಸಾಕಿರುವ ಈ ಗಿಳಿಮರಿ ನಟ ದರ್ಶನ್ ಸಿನಿಮಾದ ಹಾಡು‌ಗಳನ್ನ‌ ಸಹ ಹಾಡುತ್ತೆ. ದರ್ಶನ್‌ ನಗುವನ್ನೆ ಇಮಿಟೇಟ್ ಮಾಡುತ್ತೆ. ಇನ್ನು ಗಿಳಿಮರಿಯ ಮಾತು ಕೇಳಿ ಇದೀಗ ನಟ ದರ್ಶನ್‌ಮ ಹಾಗೂ ಅವರ ಫ್ಯಾಮಿಲಿ ಕೂಡ ಗಿಳಿ ಫ್ಯಾನ್ ಆಗ್ಬಿಟ್ಟಿದ್ದಾರೆ.

ಮನೆಯವರು ಹಾಡುವ ಮತುಗಳನ್ನ ಕೇಳಿ ಅದನ್ನೇ ಕೇಳಿ ಗಿಳಿಮರಿ ಅನುಕರಣೆ ಮಾಡುತ್ತೆ. ಇದರಿಂದಾಗಿ ನಟ ದರ್ಶನ್ ಸಿನಿಮಾದ ಹಾಡುಗಳನ್ನ ಹಾಡುವ ಗಿಳಿಮರಿ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಲವ್ ಯೂ ಹೇಳಿದೆ.  ಅಷ್ಟೆ ಅಲ್ಲದೆ‌ ಈ ಪುಟಾಣಿ ಗಿಳಿಮರಿಯು ಕನ್ನಡಭಿಮಾನಿಯಾಗಿದ್ದು, ಕನ್ನಡದ ವರ್ಣಮಾಲೆಯನ್ನು ಸ್ಪಷ್ಟವಾಗಿ ಉಚ್ಚಾರಣೆ ಮಾಡುತ್ತದೆ.

Key words: Actor- Darshan- birthday- wishes-sing-song-parrot-mysore